HEALTH TIPS

'ಟಾಟಾ ಸುಮೋ' ಎಂಬ ವಾಹನ ಹುಟ್ಟಿದ್ದೇಗೆ..? ಈ ಕಥೆ ನೀವು ಕೇಳಿರಲು ಸಾಧ್ಯವೇ ಇಲ್ಲ..!

 ಭಾರತದಲ್ಲಿ ವಾಹನ ಮಾರಾಟ ಕ್ಷೇತ್ರ ಕ್ಷಿಪ್ರ ಗತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಕೇವಲ 10 ವರ್ಷದಲ್ಲಿ ಈ ಪ್ರಗತಿ ದುಪ್ಪಟ್ಟಾಗಿದೆ. ಈಗ ಮಾರುಕಟ್ಟೆಯಲ್ಲಿ ಹತ್ತಾರು ಕಂಪನಿಯ ವಾಹನಗಳಿಗೆ ಹತ್ತಾರು ಕಂಪನಿ ಈಗ ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಕೆಲವು ದೇಶೀಯ ಕಂಪನಿಯಾಗಿದ್ದರೆ ಮತ್ತೆ ಕೆಲವು ವಿದೇಶ ಕಂಪನಿಗಳಾಗಿವೆ.

ನೀವು ಈ ದೇಶೀಯ ಕಂಪನಿಯಲ್ಲಿ ಟಾಟಾ ಹೆಸರು ಕೇಳೇ ಕೇಳಿರುತ್ತೀರಿ. ಹಿಂದಿನ ಕಾಲದಿಂದ ಇಂದಿಗೂ ವಾಹನ ಕ್ಷೇತ್ರದಲ್ಲಿ ಟಾಟಾ ಅವರ ವಾಹನಗಳೇ ಮೇಳುಗೈ ಸಾಧಿಸಿವೆ. ರತನ್ ಟಾಟಾ ಅವರ ಟಾಟಾ ಮೋಟಾರ್ಸ್ 1990 ರ ದಶಕದಲ್ಲಿ ಭಾರತದಲ್ಲಿ ಯಶಸ್ವಿ ಉದ್ಯಮವಾಗಿ ಬದಲಾಗಿತ್ತು.

ಟಾಟಾ ಸಂಸ್ಥೆಯ ಎಸ್ಟೀಮ್ ಕಾರು ಅಂದು ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿತ್ತು. ಟಾಟಾ ಸಹ ಬಡವರ ಬದುಕಿನಲ್ಲೂ ಕಾರುಗಳು ಬರಬೇಕು ಎಂದು ಟಾಟಾ ನ್ಯಾನೋ ಎಂಬ ಕಡಿಮೆ ಬೆಲೆಯ ಕಾರನ್ನೂ ಸಹ ಮಾರುಕಟ್ಟೆಗೆ ಪರಿಚಯಿಸಿದ್ದು ನಿಮಗೆ ಗೊತ್ತಿದೆ.

ಆದ್ರೆ ಟಾಟಾ ಕಂಪನಿಯ ಕಾರುಗಳಲ್ಲಿ ಅತ್ಯಂತ ಯಶಸ್ವಿಯಾಗಿದ್ದು ಅಂದ್ರೆ ಅದು ಟಾಟಾ ಸುಮೋ ಕಾರು. ಟಾಟಾ ಸುಮೋಗಳು ಭಾರತದ ಬೀದಿ ಬೀದಿಯಲ್ಲಿ ಸುತ್ತಾಡಿವೆ. ಇದು ಅತ್ಯಂತ ಜನಪ್ರಿಯ ವಾಹನಗಳಲ್ಲಿ ಒಂದಾಯಿತು. ಕೇವಲ ಮೂರು ವರ್ಷಗಳಲ್ಲಿ, ತಯಾರಕರು 1 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕೀರ್ತಿ ಪಡೆದರು.

ಆದರೆ ನಿಮಗೆ ಆ ಕಾರಿಗೆ ಟಾಟಾ ಸೊಮೋ ಎಂದು ಹೆಸರು ಬರಲು ಕಾರಣವೇನು ಎಂಬುದು ಗೊತ್ತಾ? ಈ ಕಾರು ಹುಟ್ಟಿದ್ದು ಹೇಗೆ ಇದರ ಹಿಂದಿರುವ ಅಚ್ಚರಿಯ ಕಥೆ ಏನು ಗೊತ್ತಾ?


ಟಾಟಾ ಸಂಸ್ಥೆಯ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದವರು ಎಲ್ಲರು ಒಟ್ಟಿಗೆ ಕುಳಿತು ಮಧ್ಯಾಹ್ನದ ಊಟ ಸವಿಯುತ್ತಿದ್ದರಂತೆ ಆದರೆ ಮೂಲ್ಗಾವ್ಕರ್ ಎಂಬ ಉದ್ಯೋಗಿಯೊಬ್ಬ ಮಾತ್ರ ಊಟಕ್ಕೆ ಹೊರಗೆ ಹೋಗುತ್ತಿದ್ದರೆ. ಕೆಲವು ಗಂಟೆಗಳ ಬಳಿಕ ಅವರು ಊಟ ಮುಗಿಸಿ ಕೆಲಸಕ್ಕೆ ವಾಪಾಸು ಬರುತ್ತಿದ್ದರಂತೆ. ಇದು ದಿನಾಲು ನಡೆಯುತ್ತಲೇ ಇತ್ತಂತೆ. ಆದ್ರೆ ಕಂಪನಿಯಲ್ಲಿ ಆತನ ವಿರುದ್ಧ ವದಂತಿಯೊಂದು ಹರಡಿತ್ತಂತೆ. ಮೂಲ್ಗಾವ್ಕರ್‌ಗೆ ಟಾಟಾ ವಿತರಕರು ಪಂಚತಾರಾ ಹೋಟೆಲ್‌ನಲ್ಲಿ ನಿತ್ಯವು ಊಟ ಕೊಡಿಸುತ್ತಾರೆ. ಹೀಗಾಗಿ ಅವರು ಕಂಪನಿಯ ಒಳಗೆ ಊಟ ಮಾಡುವುದಿಲ್ಲ ಎಂಬ ಗುಸು ಗುಸು ಹಬ್ಬಿತ್ತಂತೆ.

ಆದ್ರೆ ಒಂದು ದಿನ ಊಟದ ಸಮಯಕ್ಕೆ ಕಂಪನಿಯ ಉದ್ಯೋಗಿಗಳು ಆತನನ್ನು ಹಿಂಬಾಲಿಸಲು ನಿರ್ಧರಿಸಿದರಂತೆ. ಅದೇ ಊಟದ ಸಮಯಕ್ಕೆ ಮೂಲ್ಗಾವ್ಕರ್‌ ಹೊರ ಹೋದಾಗ ಅವರನ್ನು ಹಿಂಬಾಲಿಸಿದರು. ಆ ವೇಳೆ ಮೂಲ್ಗಾವ್ಕರ್‌ ಡಾಬಾ ಒಂದರ ಬಳಿ ಬಂದು ಅಲ್ಲಿದ್ದ ಡ್ರೈವರ್‌ಗಳ ಜೊತೆ ಅವರು ಊಟ ಮಾಡುತ್ತಿದ್ದರಂತೆ. ಅವರು ರಿಸರ್ಚ್ ಟೀಮ್‌ನಲ್ಲಿದ್ದ ಕಾರಣ ಟಾಟಾ ಸಂಸ್ಥೆಯ ಟ್ರಕ್ ಬಳಸುತ್ತಿದ್ದ ಡ್ರೈವರ್‌ಗಳು ಯಾವ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಮಾಹಿತಿ ಕಲೆ ಹಾಕಲು ಅವರು ಈ ರೀತಿ ಮಾಡುತ್ತಿದ್ದರಂತೆ.

ಈ ವಿಚಾರ ಇಡೀ ಸಂಸ್ಥೆಗೆ ತಿಳಿದು ಅವರು ಸಂಸ್ಥೆಯಲ್ಲಿ ಸ್ಪೂರ್ತಿದಾಯಕ ಉದ್ಯೋಗಿ ಎನಿಸಿಕೊಂಡರಂತೆ. ಈ ಡಾಬಾ ಬಳಿ ಡ್ರೈವರ್‌ಗಳು ಹೇಳಿದ ವರದಿಯಂತೆ ಅವರು ಸಂಶೋದನ ತಂಡದ ಜೊತೆ ಚರ್ಚಿಸಿ ಟ್ರಕ್‌ಗಳಲ್ಲಿ ಇದ್ದ ನ್ಯೂನತೆ ಪರಿಹರಿಸುತ್ತಿದ್ದರಂತೆ. ಬಳಿಕ ಅವರ ಹೆಸರಲ್ಲೇ ಟಾಟಾ ಒಂದು ವಾಹನ ಹೊರತರುವ ಯೋಚನೆ ಮಾಡಿತ್ತು, ಅದೇ ಟಾಟಾ ಸುಮೋ ಎಂದು ಹೆಸರಾಯಿತು. ಏಕೆಂದರೆ ಆ ಉದ್ಯೋಗಿಯ ಪೂರ್ಣ ಹೆಸರು ಸುಮಂತ್ ಮೂಲಗಾಂವ್ಕರ್ ಎಂದಾಗಿತ್ತು. ಹೀಗಾಗಿ ಟಾಟಾದ ವಾಹನಕ್ಕೆ ಟಾಟಾ ಸುಮೊ ಎಂದು ಹೆಸರಿಡಲಾಗಿತ್ತು.

ಟಾಟಾ ಸುಮೊ ಮಾರುಕಟ್ಟೆಗೆ ಬಂದು ಪ್ರಸಿದ್ಧಿ ಪಡೆದಿದ್ದು, ನಮಗೆಲ್ಲಾ ತಿಳಿದಿರುವ ವಿಚಾರ. ತೀರ ಇತ್ತೀಚಿಗೆ ಮತ್ತೊಮ್ಮೆ ಟಾಟಾ ಇದೇ ವಾಹನವನ್ನು ಬೇರೆ ಡಿಸೈನ್‌ನೊಂದಿಗೆ ಹೊರತಂದಿತ್ತು.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries