ಕಾಸರಗೋಡು: ಬ್ರಾಹ್ಮಣ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಬ್ರಾಹ್ಮಣ ಸಮಾವೇಶ ಭಾನುವಾರ ಎಡನೀರು ಮಠದ ಸಭಾಂಗಣದಲ್ಲಿ ಜರುಗಿತು. ಹವ್ಯಕ, ಕರಾಡ, ಶಿವಳ್ಳಿ, ಯೋಗಕ್ಷೇಮಸಭಾ, ಕೋಟ, ಶಿವ(ಸ್ಥಾನಿಕ), ಕೇರಳ ಬ್ರಾಹ್ಮಣ(ಅಯ್ಯರ್)ಪಂಗಡವನ್ನೊಳಗೊಂಡ ಬ್ರಾಹ್ಮಣ ಸಮಾಜದ ಜಂಟಿ ಸಮಾವೇಶವನ್ನು ಪರಿಷತ್ ರಕ್ಷಾಧಿಕಾರಿ, ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು. ಪರಿಷತ್ ಅಧ್ಯಕ್ಷ ಎಚ್ ವಿಠಲ ಭಟ್ ಅಧ್ಯಕ್ಷತೆ ವಹಿಸಿದ್ದರು.
ಬೆಳಗ್ಗೆ ಗಣಪತಿ ಹವನ, ಭಜನೆ, ನೋಂದಾವಣೆ, 10ಕ್ಕೆ ಉದ್ಘಾಟನಾ ಸಮಾರಂಭ ನಡೆಯುವುದು. ಪರಿಷತ್ ಅಧ್ಯಕ್ಷ ಎಚ್ ವಿಠಲ ಭಟ್ ಅಧ್ಯಕ್ಷತೆ ವಹಿಸಿದ್ದರು. ಕ್ಯಾಂಪ್ಕೋ ನಿರ್ದೇಶಕ ಪದ್ಮರಾಜ ಪಟ್ಟಾಜೆ, ಮಂಗಳೂರು ಕೋಟೆಕಾರಿನಲ್ಲಿ ಕಾಯಾಚರಿಸುತ್ತಿರುವ ಶೃಂಗೇರಿ ಶಾಖಾ ಮಠದ ಆಡಳಿತಾಧಿಕಾರಿ ಸತ್ಯಶಂಕರ ಬೊಳ್ಳಾವ ಹಾಗೂ ಕೇರಳ ಸರ್ಕಾರದ ನಿವೃತ್ತ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಐಎಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಿರಿಯ ವಕೀಲ ಐ.ವಿ ಭಟ್, ಡಾ. ಕೆ. ಸುಬ್ರಹ್ಮಣ್ಯ ಭಟ್, ಡಾ. ಬಿ. ಸೀತಾರಾಮ ಕಡಮಣ್ಣಾಯ, ಕಲ್ಪಮಂಗಲಂ ನಾರಾಯಣ ನಂಬೂದಿರಿ, ಕುಂಟರು ರವೀಶ ತಂತ್ರಿ, ಶಂಕರನಾರಾಯಣ ಮಯ್ಯ, ರಾಜಾರಾಮ ಎಸ್. ಪೆರ್ಲ ಉಪಸ್ಥಿತರಿದ್ದರು.
ಈ ಸಂದರ್ಭ ವಿವಿಧ ವಲಯಗಳಲ್ಲಿ ಸಾಧನೆ ನಡೆಸಿದ ಮಹನೀಯರಿಗೆ ಸನ್ಮಾನ, ವಿಚಾರಗೋಷ್ಠಿ, ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಆರ್. ಸೂರ್ಯನಾರಾಯಣ ಭಟ್ ಸ್ವಾಗತಿಸಿದರು. ಟಿ. ಗೋವಿಂದನ್ ನಂಬೂದಿರಿ ವಂದಿಸಿದರು.