ಬದಿಯಡ್ಕ: ಜನ ಸೇವೆಯೇ ಜನಾರ್ಧನ ಸೇವೆ ಎಮದು ಬದುಕಿ,ಅನಾಥರಿಗೆ ಬೆಳಕಾಗಿ 365 ಕ್ಕಿಂತಲೂ ಹೆಚ್ಚು ಉಚಿತ ಮನೆಗಳನ್ನು ನಿರ್ಮಿಸಿ ಕೊಡಮಾಡಿದ, ನೂರಾರು ನಿರ್ಗತಿಗರ ಬಾಳಿನ ಆಶಾ ಕಿರಣರಾಗಿದ್ದ ದೀನಬಂಧು ದಿ. ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ನಂತರ ಪುತ್ರ ಸಾಯಿರಾಂ ಕೃಷ್ಣ ಭಟ್ ಅವರು ತಂದೆಯ ಸೇವಾಕಾರ್ಯವನ್ನು ಮುಂದುವರಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಭಾನುವಾರ ತಮ್ಮ ಮನೆಯಲ್ಲಿ ಜರಗಿದ ಪೂಜಾದಿ ಕಾರ್ಯಗಳ ಸಂದರ್ಭದಲ್ಲಿ ಬಡಜನತೆಗೆ ಆರ್ಥಿಕ ಸಹಕಾರವನ್ನು ನೀಡಿದ್ದಾರೆ. ಯೋಗೀಶ್ ಆಚಾರ್ಯ ವರ್ಕಾಡಿ ಅವರಿಗೆ ಚಿಕಿತ್ಸೆಗೆ, ಲೀಲಾ ಬಾಡೂರುಪದವು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ, ಆಯಿಶತ್ ಮಾಜಿದಾ ಮಜಿರ್ಪಳ್ಳಕಟ್ಟೆ ಇವರ ವಿದ್ಯಾಭ್ಯಾಸಕ್ಕೆ ಹಾಗೂ ಸವಿತಾ ಕಿದೂರು ಎಂಬವರಿಗೆ ಧನಸಹಾಯವನ್ನು ಹಸ್ತಾಂತರಿಸಿದರು.
ಹಿರಿಯರಾದ ಕಿಳಿಂಗಾರು ನಡುಮನೆ ವೇದಮೂರ್ತಿ ಗೋಪಾಲಕೃಷ್ಣ ಭಟ್, ವೇದಮೂರ್ತಿ ಮಹಾಲಿಂಗೇಶ್ವರ ಭಟ್ ಮಣಿಮುಂಡ, ವಿಷ್ಣು ಭಟ್ ಮಂಗಳೂರು, ಶಾರದಾ ಸಾಯಿರಾಂ ಭಟ್, ನಿವೃತ್ತ ಅಧ್ಯಾಪಕ ಈಶ್ವರ ಭಟ್ ಕಾನ, ವೇಣುಗೋಪಾಲ ಕಿಳಿಂಗಾರು, ಸಂದೇಶ ವಾರಣಾಸಿ, ಶಿವಕುಮಾರ, ಸಂಜೀವ ರೈ ಮಾವಿನಕಟ್ಟೆ ಉಪಸ್ಥಿತರಿದ್ದರು.