ಜಮ್ಮು: ವಾಯುಪಡೆ ಬೆಂಗಾವಲು ಪಡೆ ಮೇಲಿನ ದಾಳಿಗೆ ಕಾರಣರಾದ ಉಗ್ರರ ಪತ್ತೆಗಾಗಿ ಭದ್ರತಾ ಪಡೆಗಳು ಕೈಗೊಂಡಿರುವ ಕಾರ್ಯಾಚರಣೆ ಬುಧವಾರ 5ನೇ ದಿನ ಪೂರೈಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು: ವಾಯುಪಡೆ ಬೆಂಗಾವಲು ಪಡೆ ಮೇಲಿನ ದಾಳಿಗೆ ಕಾರಣರಾದ ಉಗ್ರರ ಪತ್ತೆಗಾಗಿ ಭದ್ರತಾ ಪಡೆಗಳು ಕೈಗೊಂಡಿರುವ ಕಾರ್ಯಾಚರಣೆ ಬುಧವಾರ 5ನೇ ದಿನ ಪೂರೈಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರ ಪೊಲೀಸರು, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರು ಈ ಕಾರ್ಯಾಚರಣೆಯಲ್ಲಿ ಸೇನೆ ಜೊತೆ ಕೈಜೋಡಿಸಿದ್ದು, ಸುರಾನ್‌ಕೋಟ್ ಪ್ರದೇಶದ 20 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಕೂಂಬಿಂಗ್ ಮತ್ತು ಶೋಧ ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.
ಪೂಂಛ್ ಜಿಲ್ಲೆಯ ಶಾಯಿಸ್ತಾರ್ ಪ್ರದೇಶದಲ್ಲಿ ಏಪ್ರಿಲ್ 28ರಂದು ವಾಯುಪಡೆ ಬೆಂಗಾವಲು ಪಡೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಒಬ್ಬ ಅಧಿಕಾರಿ ಮೃತಪಟ್ಟಿದ್ದರಲ್ಲದೇ, ನಾಲ್ವರು ಗಾಯಗೊಂಡಿದ್ದರು.
ಘಟನೆಗೆ ಸಂಬಂಧಿಸಿ 26 ಜನರನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಲಾಗಿದೆ. ಸಿ.ಸಿ. ಟಿವಿ ದೃಶ್ಯಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.