ಕಾಸರಗೋಡು: ಪುಲ್ಲೂರು ಪೆರಿಯ ಗ್ರಾಮ ಪಂಚಾಯಿತಿಯ ಎಲ್ಲಾ ಜಲಾನಯನ ಪ್ರದೇಶಗಳಿಗೆ ಸರಾಗವಾಗಿ ನೀರು ಹರಿಯುವಂತೆ ಮಾಡುವ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಮುಂಗಾರು ಪೂರ್ವ ಶುಚೀಕರಣ ಕಾರ್ಯಗಳ ಅಂಗವಾಗಿ ಪುಲ್ಲೂರು ಪೆರಿಯ ಗ್ರಾಮ ಪಂಚಾಯಿತಿ ವತಿಯಿಂದ 'ಸುಂದರಂ ಪುಲ್ಲೂರ್ ಪೆರಿಯ' ಎಂಬ ಹೆಸರಿನೊಂದಿಗೆ ಎರಡನೇ ಹಂತದ ಸ್ವಚ್ಛತಾ ಅಭಿಯಾನವನ್ನು ನಡೆಸಲಾಗುತ್ತಿದೆ.
ಪಂಚಾಯಿತಿ ವ್ಯಾಪ್ತಿಯ ಎಲ್ಲ ಹೊಳೆ, ಜಲಾನಯನ ಪ್ರದೇಶಗಳಿಗೆ ನೀರಿನ ಹರಿವು ಸರಾಗವಾಗುವಂತೆ ಸಿದ್ಧತೆ ನಡೆಸಲಾಗುತ್ತಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ಸ್ವಯಂಸೇವಾ ಸಂಘಗಳ ಸಹಕಾರದೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಮಳೆಗಾಲ ಪೂರ್ವ ಸ್ವಚ್ಛತಾ ಕಾರ್ಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಸುಶಿದಂ ಸುಂದರಂ ಪುಲ್ಲೂರ್ ಪೆರಿಯ ಎಂಬ ಹೆಸರಿನ ಮುಂಗಾರು ಪೂರ್ವ ಸ್ವಚ್ಛತಾ ಅಭಿಯಾನವನ್ನು ಪಂಚಾಯಿತಿಯಾದ್ಯಂತ ನಡೆಸಲಾಘುತ್ತಿದೆ. ಮೇ 5 ರಂದು ಮನೆಗಳಲ್ಲಿ 6 ರಂದು ಸಂಸ್ಥೆಗಳಲ್ಲಿ 7 ರಂದು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಹರತಾಳ, ಶುದ್ಧ ಜಲಮೂಲಗಳಿಗೆ ಮತ್ತು ಪುಲ್ಲೂರು ಪೆರಿಯಾಕ್ಕೆ ನೀರು ಓಟ ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.