HEALTH TIPS

ಶ್ರೀ ಶಂಕರರ ವೈಭವ ಜಗತ್ತಿಗೆ ಸಾರಬೇಕು: ಎಡತೊರೆ ಮಠದ ಶ್ರೀ ಶಂಕರ ಭಾರತಿ ಸ್ವಾಮಿ ಕರೆ

                  ಕಾಲಡಿ: ಜಗದ್ಗುರು ಶ್ರೀ ಶಂಕರಾಚಾರ್ಯರ ಕೊಡುಗೆ, ಕೀರ್ತಿ ಇಡೀ ಜಗತ್ತಿಗೆ ತಲುಪಬೇಕು, ಕೇರಳದ ಮನೆ ಮನೆ ಮನೆಗಳಿಗೂ ಕಾಲಡಿಯ ಮಣ್ಣು ತಲುಪಲಿ ಎಂದು ಮೈಸೂರು ಎಡತೊರೆ ಶ್ರೀ ಯೋಗನಂದೇಶ್ವರ ಸರಸ್ವತಿ ಪೀಠದ ಶ್ರೀ ಶಂಕರ ಭಾರತೀ ಸ್ವಾಮಿಗಳು ಹೇಳಿದರು. 

                ಶ್ರೀ ಶಂಕರ ಜಯಂತಿಯಂದು ಆದಿಶಂಕರ ಜನ್ಮಭೂಮಿ ಅಭಿವೃದ್ಧಿ ಸಮಿತಿಯು ಶೃಂಗೇರಿ ಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಸಂನ್ಯಾಸಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

                  ಶ್ರೀ ಶಂಕರಾಚಾರ್ಯರ ಜನ್ಮಸ್ಥಳವಾದ ಕಾಲಡಿಯ ಶೃಂಗೇರಿ ಮಠ ಸಭಾಂಗಣದಲ್ಲಿ ನಿನ್ನೆ ಆಯೋಜಿಸಲಾಗಿದ್ದ ಶ್ರೀಶಂಕರ ಜಯಂತಿ ಆಚರಣೆಯಲ್ಲಿ ಅವರು ಆಶೀರ್ವಚನ ನೀಡಿದರು. ಇದರ ಅಂಗವಾಗಿ ಶಂಕರ ಜನ್ಮಸ್ಥಳದಲ್ಲಿ ಎಲ್ಲರೂ ಖುದ್ದಾಗಿ ಪೂಜಿಸಲು ಶ್ರೀ ಶಂಕರ ಮೂರ್ತಿಯನ್ನು ಪ್ರತಿಷ್ಠಾಪಿಸÀಲಾಯಿತು. 

               ಕುಳತ್ತೂರು ಮಠಾಧೀಶ ಚಿದಾನಂದಪುರಿ ಸ್ವಾಮಿಗಳು ಯತಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಜೂರ್ ಮಠ ಸ್ವಾಮಿ ಪ್ರಜ್ಞಾನಂದ ಸರಸ್ವತಿ, ಸ್ವಾಮಿ ಪ್ರಜ್ಞಾನಂದ ಸರಸ್ವತಿ, ಸ್ವಾಮಿ ನಂದಾತ್ಮಜಾನಂದ, ಸ್ವಾಮಿ ಕೃಷ್ಣಾತ್ಮಾನಂದ ಸರಸ್ವತಿ, ಸ್ವಾಮಿ ಅಯ್ಯಪ್ಪದಾಸ್, ಸ್ವಯಂ ಪ್ರಭಾ ಮಾತಾಜಿ ಜ್ಞಾನಾಶ್ರಮ, ದರ್ಶನಾನಂದ ಸರಸ್ವತಿ, ಸ್ವಾಮಿ ಕೃಷ್ಣಾತ್ಮಾನಂದ ಸರಸ್ವತಿ ಅನುಂಗಾರ ಪಾರ್ಶ, ಆನಂದ ಸರಸ್ವತಿ, ಸ್ವಾಮಿ ಪುರುμÉೂೀತ್ತಮಾನಂದ ಬ್ರಹ್ಮಾವರ, ಸ್ವಾಮಿ ಪುರುಷೋತ್ತಮಾನಂದ  ಅವರು ಉಪಸ್ಥಿತರಿದ್ದರು. 

                ಸಂನ್ಯಾಸಿ ಸಂಗಮದಲ್ಲಿ ಕೇರಳದ ವಿವಿಧೆಡೆಯಿಂದ ನೂರಾರು ಸನ್ಯಾಸಿಗಳು ಭಾಗವಹಿಸಿದ್ದರು. ಶ್ರೀ ಶಂಕರ ಜನ್ಮಭೂಮಿ  ಅಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ಶಂಕರ ಜಯಂತಿ ಅಂಗವಾಗಿ ಅಖಿಲ ಕೇರಳದ ಆಧಾರದ ಮೇಲೆ ನಡೆದ ಶ್ರೀ ಶಂಕರ ಸ್ತೋತ್ರ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ, ಪಾರಿತೋಷಕ ಹಾಗೂ ನಗದು ಪುರಸ್ಕಾರವನ್ನು ವಿತರಿಸಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries