ಬದಿಯಡ್ಕ: ಉಬ್ರಂಗಳ ಶ್ರೀ ಐವರು ವಿಷ್ಣುಮೂರ್ತಿ ಚಾಮುಂಡಿ ದೈವಸ್ಥಾನದಲ್ಲಿ 2024 ಡಿಸೆಂಬರ್ 24ರಿಂದ 29ರ ತನಕ ನಡೆಯುವ ಪುನಃ ಪ್ರತಿμÁ್ಠ ಬ್ರಹ್ಮಕಲಶೋತ್ಸವ ಮತ್ತು ಕಳಿಯಾಟ ಮಹೋತ್ಸವದ ಉತ್ಸವ ಸಮಿತಿ ರೂಪೀಕರಣ ಸಭೆಯು ದೈವಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ನೂರಕ್ಕೂ ಮಿಕ್ಕ ಭಕ್ತ ಮಹಾಶಯರು ಪಾಲ್ಗೊಂಡರು. ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ತಂಬಾನ್ ಆನೆಕ್ಕಲ್ಲು ಅಧ್ಯಕ್ಷತೆ ವಹಿಸಿದರು. ಉಬ್ರಂಗಳ ದೇವಾಲಯದ ಆಡಳಿತ ಮೊಕ್ತೇಸರ ಕಿಶೋರ್ ಕುಮಾರ್ ಕುಣಿಕುಳ್ಳಾಯ, ಅಂಕುರ್ ಸಂಸ್ಥೆ ಬದಿಯಡ್ಕ ಮಾಲಕ ನಿತ್ಯಾನಂದ ಶೆಣೈ, ಹರಿನಾರಾಯಣ ಶಿರಂತಡ್ಕ, ನ್ಯಾಯವಾದಿ ಅನಂತ ರಾಮ ಕಾಸರಗೋಡು, ಹರೀಶ್ ಕುಣಿಕುಳ್ಳಾಯ ನಡುಮನೆ, ಹರೀಶ್ ಗೋಸಾಡ, ಶ್ರೀಧರ ಕುರುಪ್ ಮಂಗಳೂರು, ಸಂತೋಷ್ ರೈ ಗಾಡಿಗುಡ್ಡೆ, ಕ್ಷೇತ್ರ ಕಾರ್ನವರ್ ಜಯರಾಮ ನೆಲ್ಲಿಕ್ಕುಂಜೆ, ಈಶ್ವರ ಮಾಸ್ತರ್ ಮೈಲ್ತೊಟ್ಟಿ, ಸುಬ್ರಹ್ಮಣ್ಯ ಮಾಸ್ತರ್ ಮೈಲ್ತೊಟ್ಟಿ, ಆನಂದ ಕೆ ಮವ್ವಾರು ಮೊದಲಾದವರು ಮಾತನಾಡಿದರು. ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಅನಂತಪುರ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಅಶೋಕನ್ ಆದೂರು ವಂದಿಸಿದರು. ಚಂದ್ರಶೇಖರ ಕುರುಪ್ ಉಬ್ರಂಗಳ ಕಾರ್ಯಕ್ರಮವನ್ನು ನಿರೂಪಿಸಿದರು.