ಕಾಸರಗೋಡು: ಜಿಲ್ಲೆಯ ಐದು ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಕ್ಯಾಮರಾ ಸ್ಥಾಪಿಸಲಾಗಿದೆ. ಕಾಸರಗೋಡು ಡಿಪೋದ ಐದು ಬಸ್‍ಗಳಲ್ಲಿ ಕ್ಯಾಮರಾ ಸ್ಥಾಪಿಸಲಾಗಿದ್ದು, ಕಾಂಞಂಗಾಡ್ ಡಿಪೋದ ಯಾವುದೇ ಬಸ್‍ಗಳಲ್ಲೂ ಈ ವ್ಯವಸ್ಥೆ ಇನ್ನೂ ಸ್ಥಾಪಿಸಲಾಗಿಲ್ಲ. ಸ್ಟೇಜ್ ಕ್ಯಾರೇಜ್ ವಾಹನಗಳಲ್ಲಿ ಕಡ್ಡಾಯವಾಗಿ ಕ್ಯಾಮರಾ ಸ್ಥಾಪಿಸಬೇಕೆಂಬ ಆದೇಶ ವಿರುದ್ಧ ಖಾಸಗಿ ಬಸ್ ಮಾಲಕರು ನ್ಯಾಯಾಲಕ್ಕೆ ಮನವಿ ನೀಡಿದ ಹಿನ್ನೆಲೆಯಲ್ಲಿ ಕ್ಯಾಮರಾ ಸ್ಥಾಪಿಸುವುದನ್ನು ನಿಲುಗಡೆಗೊಳಿಸಲಾಗಿತ್ತು. ನ್ಯಾಯಾಲಯ ನೀಡುವ ಆದೇಶದಂತೆ ಮುಂದಿನ ಕ್ರಮ ಉಂಟಾಗಲಿದೆ.
ಸುಳ್ಯಕ್ಕೆ ಸಂಚರಿಸುವ ಮೂರು ಅಂತಾರಾಜ್ಯ ಬಸ್‍ಗಳಲ್ಲೂ, ಕೋಟ್ಟಯಂಗೆ ಸಂಚರಿಸುವ ಎರಡು ಬಸ್‍ಗಳಳ್ಲೂ ಕ್ಯಾಮರಾ ಸ್ಥಾಪಿಸಲಾಗಿದೆ. ಒಂದು ಬಸ್‍ನಲ್ಲಿ ಕ್ಯಾಮರಾ ಸ್ಥಾಪಿಸಲು 15 ಸಾವಿರ ರೂ. ವೆಚ್ಚವಾಗುತ್ತಿದೆ. ಬಸ್‍ನ ಮುಂಭಾಗದ ದೃಶ್ಯಗಳನ್ನು ಸೆರೆಹಿಡಿಯಲು, ಪ್ರಯಾಣಿಕರನ್ನು ಸೆರೆ ಹಿಡಿಯುವ ರೀತಿಯಲ್ಲಿ ಎರಡು ಕ್ಯಾಮರಾಗಳು ಬಸ್‍ನೊಳಗಿದೆ. ಈ ಕ್ಯಾಮರಾದ ದೃಶ್ಯಗಳನ್ನು ಪರಿಶೀಲಿಸಬೇಕಾದ ಅಗತ್ಯ ಇದುವರೆಗೆ ಉಂಟಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.