HEALTH TIPS

ಶುಗರ್ ಸಮಸ್ಯೆನಾ ಅಥವಾ ತೂಕ ಇಳಿಸಬೇಕಾ? ತೊಂಡೆಕಾಯಿ ತಿನ್ನಿ ಸಾಕು ಬೆಸ್ಟ್ ರಿಸಲ್ಟ್ ಸಿಗುತ್ತೆ!

ಮಾರುಕಟ್ಟೆಗಳಲ್ಲಿ ಯಾವಾಗಲೂ ದೊರೆಯುವ ತೊಂಡೆಕಾಯಿಯ ಬಗ್ಗೆ ನಿಮಗೆಷ್ಟು ಗೊತ್ತು? ಎಲ್ಲ ತರಕಾರಿಗಳಂತೆ ಇದು ಒಂದು. ಆದರೂ ಇದರಲ್ಲಿರುವ ಗುಣಗಳು ತುಂಬಾ ವಿಶೇಷವಾಗಿದೆ. ತೊಂಡೆಕಾಯಿ ಪೌಷ್ಠಿಕಾಂಶಗಳನ್ನೊಳಗೊಂಡಿರುವ ಜೊತೆಗೆ ಔಷಧೀಯ ಗುಣಗಳನ್ನು ಸಹ ಹೊಂದಿದೆ.

ಸೌತೇಕಾಯಿ, ಕುಂಬಳಕಾಯಿ, ಸೋರೆಕಾಯಿ ಜಾತಿಯ ತರಕಾರಿಯೇ ತೊಂಡೆಕಾಯಿ, ಬಳ್ಳಿಯಲ್ಲಿ ಬಿಡುವಂತಹ ಈ ಕಾಯಿ ಸಾಮಾನ್ಯವಾಗಿ ಮನುಷ್ಯನ ಬೆರಳಿನಷ್ಟು ಉದ್ದವಿದ್ದು, ಹಸಿರು ಬಣ್ಣದಲ್ಲಿರುತ್ತದೆ. ಇದನ್ನು ಜನ ಹೆಚ್ಚಾಗಿ ತಿನ್ನಲು ಇಷ್ಟಪಡದೆ ಇರಲು ಕಾರಣ ಇದರೊಳಗಿರುವ ಅಂಟಿನ ಅಂಶ. ಆದರೆ ತೊಂಡೆಕಾಯಿ ಸೇವನೆಯಿಂದ ಅತ್ಯದ್ಭುತವಾದ ಪ್ರಯೋಜನಗಳನ್ನು ಪಡೆಯಬಹುದು.


ತೊಂಡೆಕಾಯಿಯನ್ನು ಏಷ್ಯಾ, ಆಫ್ರಿಕಾ ದೇಶಗಳಲ್ಲಿ ಹೆಚ್ಚಾಗಿ ಕಾಣಬಹುದು. ಭಾರತ, ಥೈಲ್ಯಾಂಡ್ ಹಾಗೂ ಪಿಲಿಫೈನ್ಸ್ ದೇಶಗಳಲ್ಲಿ ತೊಂಡೆಕಾಯಿಯನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಪುಟ್ಟದಾಗಿ, ಉದ್ದವಾಗಿ ಹೊರಗಿನ ಭಾಗ ಹಸಿರು, ಒಳಗಡೆ ಕೆಳ ಬೀಜಗಳಿಂದ ಕೂಡಿರುವ ಈ ತೊಂಡೆಕಾಯಿಗಳಲ್ಲಿ ಗಮನಾರ್ಹವಾದ ಔಷಧೀಯ ಗುಣಗಳು ಹೊಂದಿದೆ. ಅಡುಗೆ ಮನೆಯಲ್ಲೂ ಸಹ ಒಳ್ಳೆಯ ಖಾದ್ಯ ರೂಪದಲ್ಲಿ ಬಾಯಿಗೆ ರುಚಿ ಕೊಡುತ್ತದೆ. ಆದರೆ ಕೆಲವರಿಗೆ ಇದನ್ನು ತಿನ್ನುವುದಕ್ಕೆ ಮುಖ ಮುರಿಯುತ್ತಾರೆ. ಆದರೆ ಇಲ್ಲಿರುವ ಗುಣಗಳು ಮನುಷ್ಯನ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ತೊಂಡೆಕಾಯಿಯ 5 ಪ್ರಮುಖ ಪ್ರಯೋಜನಗಳು

1.ಹೆಚ್ಚು ಪೋಷಕಾಂಶಗಳಿರುವ ತರಕಾರಿ

ತೊಂಡೆಕಾಯಿಯು ಪೋಷಕಾಂಶಗಳ ಖಜಾನೆಯಾಗಿದೆ. ಇದರಲ್ಲಿ ಅಪಾರವಾದ ವಿಟಮಿನ್ಸ್, ಮಿನರಲ್ಸ್ ಇವೆ. ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ, ಖನಿಜಾಂಶ, ಕ್ಯಾಲ್ಸಿಯಂ ಹಾಗೂ ಪೊಟ್ಯಾಸಿಯಂ ಒಳಗೊಂಡಿರುವ ತೊಂಡೆಕಾಯಿ ಮನುಷ್ಯನಿಗೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡುತ್ತದೆ. ಒಟ್ಟಾರೆ ಆರೋಗ್ಯಕ್ಕೆ ಪೂರಕವಾಗಿರುವುದಲ್ಲದೆ, ರೋಗನಿರೋಧಕ ಶಕ್ತಿ ಹೆಚ್ಚಳ, ಮೂಳೆಗಳ ಬಲಗೊಳ್ಳುವಿಕೆ ಹಾಗೂ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿಯಾಗಿದೆ.

2. ರಕ್ತದಲ್ಲಿನ ಸಕ್ಕರೆ ನಿಯಂತ್ರಣ

ತೊಂಡೆಕಾಯಿಯಲ್ಲಿರುವ ಅಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಸಾಮರ್ಥ್ಯ ಹೊಂದಿದೆ. ಅಧ್ಯಯನಗಳು ತೊಂಡೆಕಾಯಿಯಲ್ಲಿ ಹೈಪೊಗ್ಲಿಸಿಮಿಕ್ ಗುಣಲಕ್ಷಣಗಳನ್ನು ಹೊಂದಿದೆ ಎಂದು ತಿಳಿಸಿದೆ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚುತ್ತಿರುವಾಗ ತೊಂಡೆಕಾಯಿ ಸೇವಿಸುವುದರಿಂದ ಈ ಅಪಾಯದಿಂದ ಪಾರಾಗಬಹುದು. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

3.ದೇಹದಲ್ಲಿ ಶಕ್ತಿ ಹೆಚ್ಚಳ

ಆಯಾಸವು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ತೊಂಡೆಕಾಯಿಯಲ್ಲಿರುವ ಕಬ್ಬಿಣವು ಆಯಾಸ, ನಿಶಕ್ತಿಯನ್ನು ದೂರ ಮಾಡುತ್ತದೆ. ಕಬ್ಬಿಣವು ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸಲು ಅಗತ್ಯವಾದ ಖನಿಜವಾಗಿದೆ.

4. ತೂಕ ನಿಯಂತ್ರಣ

ನೀವು ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ತೊಂಡೆಕಾಯಿ ತಿನ್ನುವುದರಿಂದ ಆರೋಗ್ಯಕರ ಹಾಗೂ ನೈಸರ್ಗಿಕವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು. ಕಡಿಮೆ ಕ್ಯಾಲೋರಿಯುಳ್ಳ ತೊಂಡೆಕಾಯಿಯಲ್ಲಿ ಫೈಬರ್ ಅಂಶ ಹೆಚ್ಚಿದೆ. ಇದು ಜೀರ್ಣಕ್ರಿಯೆಗೆ ಉತ್ತೇಜನ ನೀಡುವ ಮೂಲಕ ಅತಿಯಾಗಿ ತಿನ್ನುವುದಕ್ಕೂ ತಡೆಯೊಡ್ಡುತ್ತದೆ. ತೊಂಡೆಕಾಯಿಯಲ್ಲಿನ ಖಾದ್ಯ ತಿನ್ನುವುದರಿಂದ ದೀರ್ಘಕಾಲ ಹಸಿವಾಗದೆ ಇರುವಂತೆ ನೋಡಿಕೊಳ್ಳುತ್ತದೆ. ಇದರಿಂದ ನಿಮ್ಮ ದೇಹದ ತೂಕ ಇಳಿಕೆಗೆ ಸಹಾಯವಾಗುತ್ತದೆ.

5. ನರಗಳಿಗೆ ಬಲ

ಕಲ್ಲಂಗಡಿ ಹಣ್ಣಿನಲ್ಲಿರುವಂತಹ ಬಿ ಜೀವಸತ್ವಗಳು ತೊಂಡೆಕಾಯಿಯಲ್ಲೂ ದೊರೆಯುತ್ತದೆ. ಇದು ನರಮಂಡಲದ ಕಾರ್ಯನಿರ್ವಹಣೆಗೆ ನಿರ್ಣಾಯಕವಾಗಿದೆ. ತೊಂಡೆಕಾಯಿ ನಿಯಮಿತವಾಗಿ ಸೇವಿಸುವುದರಿಂದ ನರಗಳಿಗೆ ಶಕ್ತಿ ದೊರೆಯುವ ಜೊತೆಗೆ ಆರೋಗ್ಯಕರವಾಗಿಯೂ ಇರುವಂತೆ ಮಾಡುತ್ತದೆ.

ತೊಂಡೆಕಾಯಿಯನ್ನು ಬಳಸಿ ಪಲ್ಯ, ಗೊಜ್ಜು, ಸಾರು, ಸಾಗು ಈ ರೀತಿ ನಾನಾ ಬಗೆಯ ತಿಂಡಿ ಮಾಡಿಕೊಂಡಪ ತಿನ್ನಬಹುದು. ಇದರಿಂದ ನಾಲಿಗೆ ರುಚಿ ಜೊತೆಗೆ ಆರೋಗ್ಯಕ್ಕೂ ಪ್ರಯೋಜನ ಪಡೆಯಬಹುದು.

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries