ಕಾಸರಗೋಡು: ಕೇರಳದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಇಲಾಖೆಗಳಲ್ಲಿ ಕರ್ತವ್ಯಲೋಪವೆಸಗುವ ಸರ್ಕಾರಿ ಉದ್ಯೋಗಿಗಳನ್ನು ಶಿಕ್ಷಾ ವರ್ಗಾವಣೆಯಾಗಿ ಕಾಸರಗೋಡಿಗೆ ಕಳುಹಿಸಿಕೊಡುವ ಮೂಲಕ ಜಿಲ್ಲೆಗೆ ಎಸಗುತ್ತಿರುವ ಅವಮಾನ ಕೊನೆಗೊಳಿಸುವಂತೆ ಬಿಲ್ಡಪ್ ಕಾಸರಗೋಡು ಸೊಸೈಟಿಯ ಕಾರ್ಯಕಾರಿ ಸಭೆ ಆಗ್ರಹಿಸಿದೆ.
ಜಿಲ್ಲೆ ರಚನೆಯಾದಾಗಿನಿಂದ ಕೇರಳದ ಇತರ ಜಿಲ್ಲೆಗಳ ಸರ್ಕಾರಿ ಅಧಿಕಾರಿಗಳ ಶಿಕ್ಷಾರ್ಹ ವರ್ಗಾವಣೆಗೆ ಕಾಸರಗೋಡು ಜಿಲ್ಲೆಯನ್ನು ಬಳಸಿಕೊಳ್ಳಲಾಗುತ್ತಿದೆ. ಈ ರೀತಿ ಶಿಕ್ಷೆ ಅನುಭವಿಸಿ ಜಿಲ್ಲೆಗೆ ಬರುವ ಅಧಿಕಾರಿಗಳು ಕಾಸರಗೋಡು ಜಿಲ್ಲೆಯ ಅಭಿವೃದ್ಧಿಗೆ ತಡೆಯಾಗಿ ನಿಲ್ಲುತ್ತಿದ್ದಾರೆ. ತಮ್ಮನ್ನು ಮತ್ತೆ ಇಲ್ಲಿಂದ ಎತ್ತಂಗಡಿ ಮಾಡುವ ನಿಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ಯಾವುದಾದರೂ ಕರ್ತವ್ಯಲೋಪ ನಡೆಸುತ್ತಲೇ ಬರುವ ಇಂತಹ ಅಧಿಕಾರಿಗಳಿಂದ ಜಿಲ್ಲೆ ಅಭಿವೃದ್ಧಿಯಿಂದ ವಿಮುಖವಗುತ್ತಿದೆ. ಬಹುತೇಕ ಸರ್ಕಾರಿ ಕಚೇರಿಗಳೂ ತರುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ.ಮಾಡುತ್ತಿದ್ದೇನೆ ಜಿಲ್ಲೆ ಅಭಿವೃದ್ಧಿಯಾಗದಿರುವುದಕ್ಕೆ ಬೇರೆ ಕಾರಣಗಳಿಲ್ಲ. ಕರ್ತವ್ಯಲೋಪವೆಸಗುವ ಅಧಿಕಾರಿಗಳನ್ನು ಕಾಸರಗೋಡಿಗೆ ವರ್ಗಾವಣೆ ಮಾಡಿ ಜಿಲ್ಲೆಯ ಜನತೆಗೆ ಸಮಸ್ಯೆ ತಂದೊಡ್ಡುವುದನ್ನು ಕೊನೆಗಾಣಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೊಸೈಟಿಯ ಕಾರ್ಯಕಾರಿ ಸಭೆಯಲ್ಲಿ ಆಗ್ರಹಿಸಲಾಯಿತು.
ಬಿಲ್ಡಪ್ ಕಾಸರಗೋಡು ಸೊಸೈಟಿ ಅಧ್ಯಕ್ಷ ರವೀಂದ್ರನ್ ಕನ್ನಂಗೈ ಅಧ್ಯಕ್ಷತೆ ವಹಿಸಿದ್ದರು. ಡಾ. ಶೇಖ್ ಬಾವ, ಸುಲೈಖಾ ಮಾಹಿನ್, ಅನೂಪ್ ಕಳನಾಡ್, ಅಬ್ದುಲ್ ನಾಸಿರ್, ಡಾ.ರಶ್ಮಿ ಪ್ರಕಾಶ್, ಬಾಲಾಮಣಿ ಟೀಚರ್, ರಫೀಕ್ ಮಾಸ್ಟರ್, ದಯಾಕರ್ ಮಾಡ, ಸಾದಿಕ್ ಮಂಜೇಶ್ವರ ಉಪಸ್ಥಿತರಿದ್ದರು.