ಸಾಮಾನ್ಯವಾಗಿ,ಮೂತ್ರಪಿಂಡಗಳು ಅದನ್ನು ದೇಹದಿಂದ ಫಿಲ್ಟರ್ ಮಾಡುತ್ತವೆ.ಆದರೆ, ದೇಹದಲ್ಲಿ ಅದರ ಪ್ರಮಾಣವು ಅಧಿಕವಾಗಿದ್ದರೆ,ಅದು ಕೀಲುಗಳ ಸುತ್ತಲೂ ಹರಳುಗಳ ರೂಪದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ.ಹೆಚ್ಚಿನ ಜನರು ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ.ಇದಲ್ಲದೆ, ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಲು, ನಾವು ಸೇವಿಸುವ ಆಹಾರದ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ.
ಯೂರಿಕ್ ಆಸಿಡ್ ನಿಯಂತ್ರಿಸಲು ಸಹಾಯ ಮಾಡುವ ಅನೇಕ ಹಣ್ಣುಗಳು ನಮ್ಮ ಸುತ್ತಲೂ ಇವೆ.ಈ ಹಣ್ಣುಗಳಲ್ಲಿ ಬಾಳೆಹಣ್ಣು ಕೂಡಾ ಸೇರಿದೆ. ಬಾಳೆಹಣ್ಣು ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಯೂರಿಕ್ ಆಸಿಡ್ ನಿಯಂತ್ರಿಸುವಲ್ಲಿ ಬಾಳೆಹಣ್ಣು ಹೇಗೆ ಪ್ರಯೋಜನಕಾರಿ?:
ಯೂರಿಕ್ ಆಸಿಡ್ ಸಮಸ್ಯೆಯಲ್ಲಿ ಬಾಳೆಹಣ್ಣಿನ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಬಾಳೆಹಣ್ಣು ಕಡಿಮೆ ಪ್ಯೂರಿನ್ ಆಹಾರವಾಗಿದೆ. ಇದನ್ನು ತಿನ್ನುವುದರಿಂದ ಯೂರಿಕ್ ಆಸಿಡ್ ಹೆಚ್ಚಾಗುವುದಿಲ್ಲ.ಈ ಹಣ್ಣಿನಲ್ಲಿ ಪೊಟ್ಯಾಸಿಯಮ್ ಹೇರಳವಾಗಿ ಕಂಡು ಬರುತ್ತದೆ. ಇದು ಯೂರಿಕ್ ಆಸಿಡ್ ಸ್ಫಟಿಕಗಳ ರಚನೆಯನ್ನು ನಿಯಂತ್ರಿಸುತ್ತದೆ. ಇದು ಫೈಬರ್ ಅನ್ನು ಹೊಂದಿದ್ದು, ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಇದಲ್ಲದೆ, ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಕೀಲುಗಳಲ್ಲಿನ ನೋವು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಯೂರಿಕ್ ಆಸಿಡ್ ನಿಯಂತ್ರಣಕ್ಕೆ ಬಾಳೆಹಣ್ಣನ್ನು ಸೇವಿಸುವುದು ಹೇಗೆ ? :
ಯೂರಿಕ್ ಆಸಿಡ್ ನಿಯಂತ್ರಿಸಲು, ಬಾಳೆಹಣ್ಣನ್ನು ಹಲವು ವಿಧಗಳಲ್ಲಿ ಸೇವಿಸಬಹುದು.ಬೆಳಗಿನ ಉಪಾಹಾರಕ್ಕಾಗಿ ಬಾಳೆಹಣ್ಣು ತಿನ್ನಬಹುದು.ಸ್ಮೂಥಿ ಅಥವಾ ಶೇಕ್ ರೂಪದಲ್ಲಿಯೂ ಸೇವಿಸಬಹುದು.ಆದರೆ,ಬಾಳೆಹಣ್ಣಿನ ಶೇಕ್ ಮಾಡಲು,ಕಡಿಮೆ ಕೊಬ್ಬಿನ ಹಾಲನ್ನು ಮಾತ್ರ ಬಳಸಬೇಕು.ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಯೂರಿಕ್ ಆಸಿಡ್ ಖಂಡಿತವಾಗಿಯೂ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತದೆ.
(ಸೂಚನೆ:ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ.)