ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿ ಕೇರಳ ಎನ್‍ಜಿಒ ಯೂನಿಯನ್ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಸಾಮೂಹಿಕ ಧರಣಿ ನಡೆಸಲಾಯಿತು. ಎಲ್ಲಾ ಕ್ಯಾಶುಯಲ್ ಸ್ವೀಪರ್‍ಗಳನ್ನು ಅರೆಕಾಲಿಕ ಉದ್ಯೋಗಿಗಳನ್ನಾಗಿ ಬಡ್ತಿಗೊಳಿಸಬೇಕು, ಸಾಂಸ್ಥಿಕ ವ್ಯವಸ್ಥೆಗಳ ಭಾಗವಾಗಿ ಹೊರಗುತ್ತಿಗೆ ಪಡೆಯಬಹುದಾದ ಕ್ಯಾಶುಯಲ್ ಸ್ವೀಪರ್‍ಗಳ ಉದ್ಯೋಗ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ಆಯೋಜಿಸಲಾಗಿತ್ತು.
ಕೇರಳ ಎನ್‍ಜಿಒ ಯೂನಿಯನ್ ನೇತೃತ್ವದಲ್ಲಿ ರಾಜ್ಯ ಸಚಿವಾಲಯ ಎದುರು ಹಾಗೂ ಜಿಲ್ಲಾ ಕೇಂದ್ರದಲ್ಲಿ ಸಾಮೂಹಿಕ ಧರಣಿ ಆಯೋಜಿಸಲಾಗಿತ್ತು. ಕಾಸರಗೋಡು ಸಿವಿಲ್ ಸ್ಟೇಶನ್ ವಠಾರದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಧರಣಿಯನ್ನು ಸಂಘಟನೆ ರಾಜ್ಯಾಧ್ಯಕ್ಷ ಎಂ.ವಿ.ಶಶಿಧರನ್ ಉದ್ಘಾಟಿಸಿದರು. ವಿ.ಶೋಭಾ ಅಧ್ಯಕ್ಷತೆ ವಹಿಸಿದ್ದರು. ಕೆ.ಭಾನುಪ್ರಕಾಶ್ ಉಪಸ್ಥಿತರಿದ್ದರು. ಟಿ ದಾಮೋದರನ್ ಸ್ವಾಗತಿಸಿದರು. ವಿ ಜಗದೀಶ್ ವಂದಿಸಿದರು.