ನವದೆಹಲಿ: ಶಾಲೆಗಳಲ್ಲಿ ಅಳವಡಿಸುವ ಹವಾನಿಯಂತ್ರಿತ ವ್ಯವಸ್ಥೆಯ (ಎ.ಸಿ) ಶುಲ್ಕವನ್ನು ಪೋಷಕರೇ ಭರಿಸಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ನವದೆಹಲಿ: ಶಾಲೆಗಳಲ್ಲಿ ಅಳವಡಿಸುವ ಹವಾನಿಯಂತ್ರಿತ ವ್ಯವಸ್ಥೆಯ (ಎ.ಸಿ) ಶುಲ್ಕವನ್ನು ಪೋಷಕರೇ ಭರಿಸಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಅವರ ನೇತೃತ್ವದ ನ್ಯಾಯಪೀಠವು, ಖಾಸಗಿ ಶಾಲೆಯೊಂದು ತರಗತಿಗಳಲ್ಲಿ ಎ.ಸಿ ಸೌಲಭ್ಯ ಕಲ್ಪಿಸಿದ್ದಕ್ಕಾಗಿ ತಿಂಗಳಿಗೆ ₹2,000 ಶುಲ್ಕ ವಿಧಿಸಿದ್ದನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಜಾಗೊಳಿಸಿತು.
'ಶಾಲೆಯ ನಿರ್ವಹಣೆಗೆ ತಗಲುವ ವೆಚ್ಚವನ್ನು ಆಡಳಿತ ಮಂಡಳಿಯೊಂದೇ ಭರಿಸಲು ಸಾಧ್ಯವಿಲ್ಲ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವ ಮೊದಲೇ ಆ ಶಾಲೆಯ ಖರ್ಚು-ವೆಚ್ಚಗಳ ಬಗ್ಗೆ ತಿಳಿದುಕೊಳ್ಳಬೇಕು' ಎಂದು ನ್ಯಾಯಪೀಠ ಹೇಳಿತು.
ವಿದ್ಯಾರ್ಥಿಗಳಿಗೆ ಎ.ಸಿ ಸೌಲಭ್ಯ ಒದಗಿಸುವುದು ಶಾಲೆಯ ಜವಾಬ್ದಾರಿ ಎಂದು ಅರ್ಜಿದಾರರು ವಾದಿಸಿದರು.
'ಇದು ವಿದ್ಯಾರ್ಥಿಗಳಿಗೆ ಒದಗಿಸುವ ಸೌಲಭ್ಯ. ಪ್ರಯೋಗಾಲಯ ಶುಲ್ಕ, ಸ್ಮಾರ್ಟ್ ತರಗತಿ ಶುಲ್ಕದಂತೆಯೇ ಇದನ್ನು ಪರಿಗಣಿಸಬಹುದು' ಎಂದು ಕೋರ್ಟ್ ತಿಳಿಸಿತು.