ಕಾಸರಗೋಡು: ಕೇರಳದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದ್ದು, ಸೂರ್ಯಾಘಾತದ ಸಾಧ್ಯತೆ ಇರುವುದರಿಂದ ಬಿಸಿಲಿಗೆ ಮೈಯೊಡ್ಡಿ ಕೆಲಸ ಮಾಡುವ ಕಾರ್ಮಿಕರ ಕೆಲಸದ ಅವಧಿಯನ್ನು ನಿಯಂತ್ರಿಸಿ ಜಿಲ್ಲೆಯಲ್ಲಿ ಕಾರ್ಮಿಕ ಆಯುಕ್ತರು ಹೊರಡಿಸಿರುವ ಆದೇಶವನ್ನು ಮತ್ತೆ ವಿಸ್ತರಿಸಿದ್ದಾರೆ.
ಹಗಲಿನ ಹೊತ್ತು ಕೆಲಸ ಮಾಡುವ ಕಾರ್ಮಿಕರಿಗೆ ಮಧ್ಯಾಹ್ನ 12 ಗಂಟೆಯಿಂದ ಸಂಜೆ 3 ಗಂಟೆಯ ವರೆಗೆ ವಿಶ್ರಾಂತಿ ಸಮಯವಾಗಿರುವುದು. ಇವರ ಕೆಲಸದ ಸಮಯ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯ ತನಕ, ಈ ಕಾಲಾವಧಿಯಲ್ಲಿ 8 ಗಂಟೆಗಳ ಕಾಲ ಎಂಬುದಾಗಿ ನಿಗದಿಪಡಿಸಲಾಗಿದೆ.
ಪಾಳಿ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬೆಳಗ್ಗಿನ ಪಾಳಿ ಮದ್ಯಾಹ್ನ 12 ಗಂಟೆಗೆ ಕೊನೆಗೊಳ್ಳಲಿದ್ದು, ಮಧ್ಯಾಹ್ನದ ಪಾಳಿ 3 ಗಂಟೆಗೆ ಪ್ರಾರಂಭವಾಗಲಿದೆ. ಪರಿಷ್ಕøತ ವೇಳಾಪಟ್ಟಿಯು ಮೇ 1 ರಿಂದ 15ರ ವರೆಗೆ ಅನ್ವ¬ಸಲಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆ ತಿಳಿಸಿದೆ.