ತಾಮ್ಲುಕ್: ಟಿಎಂಸಿಯು ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೂ, ರಾಷ್ಟ್ರಮಟ್ಟದಲ್ಲಿ 'ಇಂಡಿಯಾ' ಒಕ್ಕೂಟದ ಜತೆಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ತಾಮ್ಲುಕ್: ಟಿಎಂಸಿಯು ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೂ, ರಾಷ್ಟ್ರಮಟ್ಟದಲ್ಲಿ 'ಇಂಡಿಯಾ' ಒಕ್ಕೂಟದ ಜತೆಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಟಿಎಂಸಿಯು 'ಇಂಡಿಯಾ' ಒಕ್ಕೂಟಕ್ಕೆ ಬಾಹ್ಯ ಬೆಂಬಲ ನೀಡಲಿದೆ ಎಂದು ಹೇಳಿಕೆ ನೀಡಿದ್ದ ಮರುದಿನ ಅವರು ಈ ಸ್ಪಷ್ಟನೆ ಕೊಟ್ಟಿದ್ದಾರೆ.
ತಾಮ್ಲುಕ್‌ನಲ್ಲಿ ಗುರುವಾರ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿ, 'ನಾನು ಕಳೆದ ದಿನ ನೀಡಿದ್ದ ಹೇಳಿಕೆಯನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. 'ಇಂಡಿಯಾ' ಒಕ್ಕೂಟವು ನನ್ನ ಚಿಂತನೆಯ ಫಲ ಆಗಿದೆ. ರಾಷ್ಟ್ರಮಟ್ಟದಲ್ಲಿ ನಾವು ಜತೆಯಾಗಿದ್ದು, ಮುಂದೆಯೂ ಒಟ್ಟಾಗಿರುತ್ತೇವೆ' ಎಂದು ತಿಳಿಸಿದರು.
ಆದರೆ ಸಿಪಿಎಂ ಮತ್ತು ಕಾಂಗ್ರೆಸ್‌ನ ಬಂಗಾಳದ ರಾಜ್ಯ ಘಟಕಗಳು ಬಿಜೆಪಿ ಜತೆ ಕೈಜೋಡಿಸಿವೆ ಎಂದು ಆರೋಪಿಸಿದ ಅವರು, 'ಸಿಪಿಎಂ ಮತ್ತು ಕಾಂಗ್ರೆಸ್‌ನವರು ಬಂಗಾಳದಲ್ಲಿ ನಮ್ಮ ಜತೆ ಇಲ್ಲ. ಅವರು ಬಿಜೆಪಿ ಜತೆ ಇದ್ದಾರೆ' ಎಂದರು.