ಅಲಪ್ಪುಳ : ಅಲಪ್ಪುಳದ ಪಲ್ಲರಿಮಂಗಲಂ ಬಳಿಯ 1100 ಚದರ ಗಜದ ಮನೆಯನ್ನು ಹಿಂಬದಿಗೆ ಸ್ಥಳಾಂತರಿಸಲಾಯಿತು. ಮಾವೇಲಿಕ್ಕರ ಪೊನ್ನರಂತೋಟ್ಟಂ ಮೂಲದ ರಾಮಚಂದ್ರನ್ ನಾಯರ್ ಎಂಬುವವರ ಮನೆ ಯಾವುದೇ ಅಡೆತಡೆಗಳಿಲ್ಲದೆ, ಸುರಕ್ಷಿತವಾಗಿ ಸ್ಥಳಾಂತರಗೊಂಡಿದೆ. ಹರಿಯಾಣ ಕುರುಕ್ಷೇತ್ರ ಮೂಲದ ಶ್ರೀರಾಮ್ ಬಿಲ್ಡಿಂಗ್ ಲಿಫ್ಟಿಂಗ್ ಮೂಲಕ ಮನೆಯನ್ನು ಸ್ಥಳಾಂತರಿಸಲಾಗಿದೆ.
ಖರೀದಿಸಿದ ಮನೆಯನ್ನು ಕೆಡವಲು ಮನಸ್ಸು ಬಾರದೆ ಕುಟುಂಬದ ಯಜಮಾನನ ಇಚ್ಛೆಯಂತೆ ಮನೆಯನ್ನು ಕಿತ್ತೊಗೆಯದೇ ಹಿಂಬದಿಗೆ ಸ್ಥಳಾಂತರಿಸಲಾಗಿದೆ. 1,100 ಚದರ ಅಡಿ ವಿಸ್ತೀರ್ಣದ ಮನೆಯನ್ನು 45 ಅಡಿ ಹಿಂದಕ್ಕೆ ಮತ್ತು 5 ಅಡಿ ಬದಿಗೆ ಸರಿಸಲಾಗಿದೆ.
ಹರಿಯಾಣ ಕುರುಕ್ಷೇತ್ರ ಮೂಲದ ಶ್ರೀರಾಮ್ ಬಿಲ್ಡಿಂಗ್ ಲಿಫ್ಟಿಂಗ್‍ನ ಆರು ಕಾರ್ಮಿಕರು 45 ದಿನಗಳ ಕಾಲ ಶ್ರಮವಹಿಸಿ ಮನೆಯನ್ನು ಹಿಂಬದಿಗೆ ಸ್ಥಳಾಂತರಿಸಿದರು. ಮೂರು ಅಂತಸ್ತಿನ ಕಟ್ಟಡವನ್ನು ಯಾವುದೇ ತೊಂದರೆಯಿಲ್ಲದೆ ಹಿಂದಕ್ಕೆ ಸ್ಥಳಾಂತರಿಸಿದವರು ನಾವೇ ಎಂದು ಕಾರ್ಮಿಕರು ಸ್ಥಳೀಯರಿಗೆ ಹೆಮ್ಮೆಯಿಂದ ಹೇಳುತ್ತಾರೆ. ಚೆಟ್ಟಿಕುಳಂಗರ ದೇವಗಿರಿ ಬಿಲ್ಡಿಂಗ್ ಡೆವಲಪರ್‍ಗಳು ಸಹಕರಿಸಿದ್ದರು.
ಎಲ್‍ಐಸಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನಿವೃತ್ತರಾದ ಮಾವೇಲಿಕ್ಕರ ಪೆÇನ್ನರಂತೋಟ್ಟಂ ಮೂಲದ ರಾಮಚಂದ್ರನ್ ನಾಯರ್ ಅವರು ನಾಲ್ಕು ವಷರ್Àಗಳ ಹಿಂದೆ ಪಲ್ಲರಿಮಂಗಲಂ ಅಶೋಕ್ ನಿವಾಸ್ ಎಂಬ ಕಾಂಕ್ರೀಟ್ ಮನೆ ಮತ್ತು 26 ಸೆಂಟ್ಸ್ ಜಮೀನನ್ನು ಖರೀದಿಸಿದ್ದರು. ಹಿಂಬದಿಯಲ್ಲಿ ಸಾಕಷ್ಟು ಜಾಗವಿದ್ದರೂ ಮನೆ ರಸ್ತೆಯ ಸಮೀಪವೇ ಇರುವುದರಿಂದ ಅನಾನುಕೂಲ ಎನಿಸಿದ್ದರಿಂದ ರಾಮಚಂದ್ರನ್ ನಾಯರ್ ಮೊದಲು ಮನೆ ಕೆಡವಿ ಹೊಸ ಮನೆ ಕಟ್ಟಲು ಯೋಚಿಸಿದ್ದರು. ಘನ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲು ವೆಚ್ಚ ಹೆಚ್ಚಾಗಿದ್ದರಿಂದ ಕಟ್ಟಡವನ್ನು ಹಿಂದಕ್ಕೆ ಸ್ಥಳಾಂತರಿಸಲು ಚಿಂತನೆ ನಡೆಸಿದರು.
ತಿಂಗಳ ಹುಡುಕಾಟದ ನಂತರ, ಕುರುಕ್ಷೇತ್ರ ಶ್ರೀರಾಮ್ ತಂಡವು ಮುಂಬೈನಲ್ಲಿ ಭೇಟಿಯಾದರು. ಕಳೆದ 45 ದಿನಗಳಿಂದ ಆರು ಜನ ನೌಕರರು ಕಟ್ಟಡವನ್ನು ಸ್ಥಳಾಂತರಿಸುವ ಕೆಲಸ ನಿರ್ವಹಿಸಿದರು. ಕಂಪನಿಯೊಂದಿಗೆ 90 ದಿನಗಳ ಒಪ್ಪಂದವಿತ್ತು. ಕಟ್ಟಡವನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸುವ ಒಟ್ಟು ವೆಚ್ಚ ಸುಮಾರು ರೂ.8 ಲಕ್ಷ ನಿರೀಕ್ಷಿಸಲಾಗಿದೆ.
ಕಟ್ಟಡವನ್ನು ಹಿಂದಕ್ಕೆ ತಳ್ಳಲು ಚಾನಲ್ ತಯಾರಿಸಲು ತಿರುವಳ್ಳ ಪೆÇಡಿಯಾಡಿಯಿಂದ ಗಟ್ಟಿಯಾದ ಸಿಮೆಂಟ್ ಬ್ಲಾಕ್ ಅನ್ನು ಖರೀದಿಸಲಾಗಿದೆ. ಕಟ್ಟಡವನ್ನು ಎತ್ತರಿಸುವ ಜೊತೆಗೆ ಹೊಸ ಸ್ಥಳದಲ್ಲಿ ನೆಲಮಾಳಿಗೆಯ ನಿರ್ಮಾಣವನ್ನು ಸಹ ಮಾಡಲಾಗಿದ್ದು, ಕಟ್ಟಡವನ್ನು ತ್ವರಿತವಾಗಿ ಸ್ಥಳಾಂತರಿಸಲು ಸಾಧ್ಯವಾಯಿತು. ದೇವಗಿರಿ ಬಿಲ್ಡರ್ಸ್ ವ್ಯವಸ್ಥಾಪಕ ನಿರ್ದೇಶಕ ಕೆ.ಗೋಪಕುಮಾರ್ ಮತ್ತು ಎಂಜಿನಿಯರ್ ಎಂ.ಮಹೇಶ್ ಮಾತನಾಡಿ, ಕಟ್ಟಡವನ್ನು ಹೊಸ ನೆಲಮಾಳಿಗೆಗೆ ಜೋಡಿಸಿ ನೆಲದ ವ್ಯವಸ್ಥೆ ಮಾಡಲಾಗಿದ್ದು, ಇನ್ನೆರಡು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.