ಮುಳ್ಳೇರಿಯ: ಪೆರಿಯ ಗೋಕುಲಂ ಗೋಶಾಲೆಗೆ 2024ನೇ ಸಾಲಿನ ರಾಜ್ಯಸ್ತರದ ಗೋಪಾಲ ಗೌರವ ಪ್ರಶಸ್ತಿ ಲಭಿಸಿದೆ. ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ಟ್ರಸ್ಟ್, ಸಹಾರಾ ಫೌಂಡೇಶನ್ ಮುಂಬಯಿ ಇವರ ಸಹಕಾರದಿಂದ ಗೋಸಂಕುಲದ ಶುಭಾಷಿತ ಸಹಿತ ಗೋಪಾಲ ಗೌರವ ಪ್ರಶಸ್ತಿಯನ್ನು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಅನುಗ್ರಹದೊಂದಿಗೆ ನೀಡಲಾಯಿತು. ಮುಂಬೈ ಸಹಾರಾ ಗ್ರೂಪ್‍ನ ದಿನೇಶ್ ಸಹಾರಾ, ಕಾಮದುಘಾ ಟ್ರಸ್ಟ್‍ನ ಡಾ. ವೈ.ವಿ.ಕೃಷ್ಣಮೂರ್ತಿ ಈ ಸಂದಭರ್Àದಲ್ಲಿ ಜೊತೆಗಿದ್ದರು. 17000 ರೂಪಾಯಿ ಹಾಗೂ ಪ್ರಶಸ್ತಿಫಲಕವನ್ನು ಗೋಕುಲಂ ಗೋಶಾಲೆಯ ನಾಗರತ್ನ ವಿಷ್ಣು ಹೆಬ್ಬಾರ್ ಸ್ವೀಕರಿಸಿ ಶ್ರೀಗಳ ಆಶೀರ್ವಾದವನ್ನು ಪಡೆದುಕೊಂಡರು. ಗೋಕುಲಂ ಗೋಶಾಲೆಯಲ್ಲಿ ನೂರಕ್ಕೂ ಅಕ ದೇಶೀಯ ತಳಿಯ ಗೋವುಗಳ ಸಾಕಣೆ, ಗೋಉತ್ಪನ್ನಗಳ ತಯಾರಿ ನಡೆಯುತ್ತಿದೆ.