ಉಪ್ಪಳ: ಕಲಾಕುಂಚ ಕೇರಳ ಗಡಿನಾಡ ಶಾಖೆ ಮತ್ತು ಗೀತಾಜ್ಞಾನ ಯಜ್ಞ ಸಮಿತಿ ವತಿಯಿಂದ ಹತ್ತು ದಿನಗಳ ಕಾಲ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮಂಗಲ್ಪಾಡಿ ಶಾರದಾ ಏಕಾಹ ಭಜನಾ ಮಂದಿರದಲ್ಲಿ ನಡೆಯಿತು.
ಸಾಹಿತಿ,ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಸಮಾರಂಭ ಉದ್ಘಾಟಿಸಿದರು. ಧರ್ಮತ್ತಡ್ಕ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಶಿಕ್ಷಕಿ ಉಮಾದೇವಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಪೆÇ್ರ.ಶ್ರೀ ಪಿ.ಎನ್ ಮೂಡಿತ್ತಾಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳಿಗೆ ಶಿಶು ಗೀತೆಯೊಂದನ್ನು ಅಭಿನಯದ ಮೂಲಕ ಕಲಿಸಿ ಕೊಟ್ಟರು. ಶಂಕರನಾರಾಯಣ ಭಟ್ ಕಿದೂರು, ಪಾಣಿ ಬಲ್ಲಾಳ್, ಜಯಲಕ್ಷ್ಮಿ ಕಾರಂತ, ಪಾಣಿ ಬಲ್ಲಾಳ್ ಉಪಸ್ಥಿತರಿದ್ದರು.
ಈ ಸಂದರ್ಭ ಹಿರಿಯ ಪತ್ರಕರ್ತ, ಸಾಹಿತಿ,ರಾಧಾಕೃಷ್ಣ ಉಳಿಯತ್ತಡ್ಕ ಇವರನ್ನು ಸನ್ಮಾನಿಸಲಾಯಿತು. ಸವಿತಾ ಮಹೇಶ್ ಅವರು ಸನ್ಮಾನಿತರ ಪರಿಚಯ ನೀಡಿದರು. ಮಾಸ್ಟರ್ ಸಂಕರ್ಷಣ್ ಇವರಿಂದ "ಮಂಡೂಕ ಚರಿತ್ರೆ"ಇದರ ಕುರಿತಾಗಿ ಚಿಂತನ ನಡೆಯಿತು.
ಹತ್ತು ದಿನಗಳ ಕಾಲ ನಡೆದ ಶಿಬಿರದ ಕುರಿತಾದ ವರದಿಯನ್ನು ಪ್ರಭಾವತಿ ವಾಚಿಸಿದರು. ಈ ಸಂದರ್ಭ ಶಿಬಿರಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಪ್ರಭಾವತಿ ಟೀಚರ್ ಅವರನ್ನು ಶ್ರೀಮತಿ ಜಯಲಕ್ಷ್ಮಿಕಾರಂತ್ ಹಾಗೂ ಅತಿಥಿಗಳು ಸನ್ಮಾನಿಸಿದರು.
ಮಾಸ್ಟರ್ ವೇದಾಂತ್ ಮತ್ತು ಕುಮಾರಿ ಅಪರ್ಣಾ ಪ್ರಾರ್ಥನಾ ಗೀತೆ ಹಾಡಿದರು. ಚಂದನ್ ಕಾರಂತ್ ಸ್ವಾಗತಿಸಿದರು. ಜಯಲಕ್ಷ್ಮಿ. ರಾಮಚಂದ್ರ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು ತಾರಲತಾ ವಂದಿಸಿದರು. ಬಹುಮುಖ ಪ್ರತಿಭೆ ಶಿಬಿರಾರ್ಥಿ ಕುಮಾರಿ ಅಪರ್ಣಾ ಅವರಿಂದ ಯೋಗ ಪ್ರದರ್ಶನ ನಡೆಯಿತು.