ಪತ್ತನಂತಿಟ್ಟ: ಶಬರಿಮಲೆ ಸನ್ನಿಧಾನದಲ್ಲಿ ವಿಐಪಿ ದರ್ಶನಕ್ಕೆ ಅವಕಾಶ ನೀಡಬಾರದು ಎಂದು ದೇವಸ್ವಂ ವಿಜಿಲೆನ್ಸ್ ಎಸ್ಪಿ ಆಡಳಿತಾಧಿಕಾರಿಗೆ ಪತ್ರ ಬರೆದಿದ್ದಾರೆ.
ದೇವಸ್ವಂ ವಿಜಿಲೆನ್ಸ್ ಎಸ್ಪಿ ಟಿಕೆ ಸುಬ್ರಮಣಿಯನ್ ಈ ಪತ್ರವನ್ನು ನೀಡಿದ್ದಾರೆ. ಸನ್ನಿಧಾನದ ಮೊದಲ ಸಾಲಿನಿಂದ ವಿಐಪಿ ದರ್ಶನ ನೀಡುವುದರಿಂದ ಸಾಮಾನ್ಯ ಯಾತ್ರಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ ಸನ್ನಿಧಿಯ ಪರಂಪರೆಯ ಕ್ರಮಗಳಿಂದ ಮುಕ್ತರಾಗಿ ದರ್ಶನಕ್ಕೆ ನೀಡಿದ ಕ್ರಮದ ವಿರುದ್ದ ಹೈಕೋರ್ಟ್ ನಿಷೇಧ ಹೇರಿತ್ತು. ದೇವಸ್ವಂ ಮಂಡಳಿಯನ್ನು ಸಂಪರ್ಕಿಸದೆ ಎಸ್ಪಿ ಪತ್ರ ನೀಡಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಆದರೆ ಈ ಘಟನೆ ಬಗ್ಗೆ ದೇವಸ್ವಂ ಇನ್ನೂ ಸ್ಪಷ್ಟವಾಗಿ ಪ್ರತಿಕ್ರಿಯಿಸಿಲ್ಲ.