ಉಪ್ಪಳ: ಜಿಲ್ಲಾ ಬಂಟರ ಸಂಘದ ಸದಸ್ಯರ ವಿಶೇಷ ಸಭೆ ಐಲ ಶ್ರೀದುರ್ಗಾಪರಮೇಶ್ವರಿ ಕಲಾಭವನದಲ್ಲಿ ಜರಗಿತು.
ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಐ.ಸುಬ್ಬಯ್ಯ ರೈ ಅಧ್ಯಕ್ಷತೆ ವಹಿಸಿದ್ದರು. ಕೊಡುಗೈ ದಾನಿ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಬಂಟರು ಮೇಲ್ಪಂತಿಯಲ್ಲಿರುವವರು. ಸಮಾಜದ ಎಲ್ಲಾ ರಂಗದಲ್ಲಿ ತಾವು ತೊಡಗಿಸಿಕೊಂಡು ರಕ್ತಗತವಾಗಿ ನಾಯಕತ್ವ ಗುಣವನ್ನು ಬೆಳೆಸಿದವರು. ಜಿಲ್ಲೆಯ ಎಲ್ಲ ಬಂಟರು ಒಗ್ಗಟ್ಟಿನಿಂದ ದುಡಿದು ಸಂಘದ ಅಭಿವೃದ್ಧಿಗೆ ಶ್ರಮಿಸಬೇಕಾಗಿ ಕರೆ ನೀಡಿದರು.
ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಉದ್ಯಮಿ ರಘುರಾಮಶೆಟ್ಟಿ, ಸಂಜೀವ ಶೆಟ್ಟಿ ತಿಂಬರ, ಲಕ್ಷ್ಮೀಶ ಭಂಡಾರಿ, ಹುಡ್ಕೋ ರವೀಂದ್ರ ಆಳ್ವ ಕೋಟೆಕಾರು, ಮಧುಕರ ರೈ ಕೊರೆಕ್ಕಾನ ಶುಭ ಹಾರೈಸಿದರು.
ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ರೈ ಪೆರಡಾಲ ಗುತ್ತು, ಸಂಜೀವ ಶೆಟ್ಟಿ ಮೊಟ್ಟೆಕುಂಜ, ಜಿಲ್ಲಾ ಬಂಟರ ಸಂಘದ ಕೋಶಾಧಿಕಾರಿ ಚಿದಾನಂದ ಆಳ್ವ ಮಂಜಕೊಟ್ಟಿಗೆ, ಸತೀಶ್ಚಂದ್ರ ಭಂಡಾರಿ ಕೋಳಾರು, ಬಂಟರ ಸಂಘದ ಕುಂಬಳೆ ಫಿರ್ಕಾ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ, ಕಿರಣ್ ಮಾಡ, ಗೋಪಾಲಕೃಷ್ಣ ಶೆಟ್ಟಿ ಕುತ್ತಿಕ್ಕಾರ್, ಪಟ್ಲ ದಾಮೋದರ ಶೆಟ್ಟಿ ಉಪಸ್ಥಿತರಿದ್ದರು. ರಾಷ್ಟ್ರೀಯ ಹೆದ್ದಾರಿ ಸಮೀಪ ಸಂಘಕ್ಕೆ ನೂತನ ಸ್ಥಳ ಖರೀದಿಸಿ ನೂತನ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಸಮಲೋಚಿಸಿ ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲೆಯ 18 ಪಂಚಾಯತಿಗಳಿಂದ ಸುಮಾರು 500 ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಐಲ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್ ರೈ, ವಂದಿಸಿದರು.