ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಮತ ಎಣಿಕೆ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆದ ಕೆ. ಇನ್ಬಾಶೇಖರನ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಚುನಾವಣಾಧಿಕಾರಿಗಳ ಸಭೆಯಲ್ಲಿ ಮತ ಎಣಿಕೆ ಸಿದ್ಧತೆ ಕುರಿತು ಪರಿಶೀಲನೆ ನಡೆಸಲಾಯಿತು. ಜೂನ್ 4 ರಂದು ಪೆರಿಯ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ನಡೆಯಲಿರುವ ಮತ ಎಣಿಕೆಗೆ ಚುನಾವಣಾ ಆಯೋಗ ಹಾಗೂ ಸಹಾಯಕ ಚುನಾವಣಾಧಿಕಾರಿಗಳಾದ ಸಬ್ ಕಲೆಕ್ಟರ್ ಸುಫಿಯಾನ್ ಅಹಮದ್, ಜಾಗಿಪೆÇೀಲ್, ಪಿ.ಬಿನುಮೋನ್, ನಿರ್ಮಲರೀತಾ ಗೋಮ್ಸ್ ಮಾರ್ಗಸೂಚಿಯಂತೆ ಸಿದ್ಧತೆಗಳು ಪ್ರಗತಿಯಲ್ಲಿವೆ ಎಂದು ಸಭೆ ನಿರ್ಣಯಿಸಿತು.
ಪಿ. ಶಾಜು ಸಿರೋಶ್ ಪಿ. ಜಾನ್ ಕೆ. ಅಜಿತ್ ಕುಮಾರ್ ಚುನಾವಣಾ ಅಪರ ಜಿಲ್ಲಾಧಿಕಾರಿ ಪಿ. ಅಖಿಲ ಎಡಿಎಂ ಕೆ.ವಿ. ಶೃತಿ ನೋಡಲ್ ಅಧಿಕಾರಿಗಳು ತಹಸೀಲ್ದಾರ್ ಚುನಾವಣಾ ವಿಭಾಗದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ಪೋಸ್ಟ್ಟಲ್ ಬ್ಯಾಲೆಟ್, ಎಆರ್‍ಒ ಮೈಕ್ರೋ ಅಬ್ಸರ್ವರ್ ಎಣಿಕೆ ಮೇಲ್ವಿಚಾರಕ ಎಣಿಕೆ ಸಹಾಯಕರಿಗೆ ತರಬೇತಿ ನೀಡಲಾಯಿತು.