ಕರಾಚಿ: 'ರಾಜಕೀಯದಲ್ಲಿ ಮಧ್ಯ ಪ್ರವೇಶಿಸುವಂತೆ ನಮ್ಮ ಪಕ್ಷ ಎಂದಿಗೂ ಸೇನೆಯನ್ನು ಆಹ್ವಾನಿಸಿಲ್ಲ' ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ನಾಯಕ ಆರಿಫ್ ಅಲ್ವಿ ಹೇಳಿದ್ದಾರೆ.
ಕರಾಚಿ: 'ರಾಜಕೀಯದಲ್ಲಿ ಮಧ್ಯ ಪ್ರವೇಶಿಸುವಂತೆ ನಮ್ಮ ಪಕ್ಷ ಎಂದಿಗೂ ಸೇನೆಯನ್ನು ಆಹ್ವಾನಿಸಿಲ್ಲ' ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ನಾಯಕ ಆರಿಫ್ ಅಲ್ವಿ ಹೇಳಿದ್ದಾರೆ.
'ಅರ್ಥಪೂರ್ಣ ಮಾತುಕತೆ ನಡೆಸಲು ಸಾಧ್ಯವಿರುವ ಏಕೈಕ ಮಧ್ಯಸ್ಥಗಾರ ಸೇನೆ ಎನ್ನುವುದೇನೋ ನಿಜ' ಎಂಬುದನ್ನು ಒಪ್ಪಿಕೊಂಡಿರುವ ಅವರು, ಈ ಕುರಿತು ನಿರ್ಧರಿಸುವ ಅಧಿಕಾರ ಅದಕ್ಕಿದೆ ಎಂದಿದ್ದಾರೆ.
ಇಲ್ಲಿನ ಪ್ರೆಸ್‌ಕ್ಲಬ್‌ನ ಹೊರಗೆ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, 'ಇದನ್ನು ನಿರ್ಧರಿಸುವ ಅಧಿಕಾರ ಹೊಂದಿರುವವರ ಜತೆಗೆ ಮಾತನಾಡಲು ಇಮ್ರಾನ್ ಖಾನ್ ಬಯಸುತ್ತಾರೆ' ಎಂದು ಹೇಳಿದ್ದಾರೆ.
'ಆದರೆ, ನಮೂನೆ 47 ಮೂಲಕ ಅಧಿಕಾರಕ್ಕೆ ಬಂದವರ ಕೊಡುಗೆ ಏನು? ಅವರ ಜತೆ ಮಾತುಕತೆ ನಡೆಸಿದರೆ ಪ್ರಯೋಜನ ಇದೆಯೇ?' ಎಂದೂ ಅವರು ಕೇಳಿದ್ದಾರೆ.
'ಶೆಹಬಾಜ್ ಷರೀಫ್ ನೇತೃತ್ವದ ಪಕ್ಷವು ಫೆಬ್ರುವರಿಯಲ್ಲಿ ನಡೆದ ಚುನಾವಣೆಯಲ್ಲಿ ವಾಮಮಾರ್ಗದಲ್ಲಿ ಗೆಲುವು ಸಾಧಿಸಿದೆ. ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿಗೆ (ಪಿಪಿಪಿ) ಅನುಕೂಲವಾಗುವಂತೆ ಫಲಿತಾಂಶವನ್ನು ನಮೂನೆ 47 ಮೂಲಕ ಬದಲಿಸಲಾಗಿದೆ' ಎನ್ನುವುದು ಪಿಟಿಐ ಪಕ್ಷದ ಪ್ರತಿಪಾದನೆಯಾಗಿದೆ.