ಕಾಸರಗೋಡು: ಈಸ್ಟ್ ಎಳೇರಿ ಗ್ರಾ.ಪಂ.ವ್ಯಾಪ್ತಿಯ ವಿವಿಧೆಡೆ ಶುಚೀಕರಣ ಮಾನದಂಡ ಪಾಲಿಸದೆ ಕಾರ್ಯಾಚರಿಸುತ್ತಿದ್ದ ಸಂಸ್ಥೆಗಳ ವಿರುದ್ಧ ಜಿಲ್ಲಾ ಎನ್‍ಫೋರ್ಸ್‍ಮೆಂಟ್ ಸ್ಕ್ವೇಡ್ ಕಾರ್ಯಾಚರಣೆ ನಡೆಸಿದೆ. ಶುಚಿತ್ವ ಪಾಲಿಸದೆ ಕಾರ್ಯಾಚರಿಸುತ್ತಿದ್ದ ಚಿತ್ತಾರಿಕಲ್‍ನ ಮಾರಿಕಲ್ ಹಂದಿ ಫಾರಂ ಹಾಗೂ ಕಸಾಯಿಖಾನೆಗೆ ತಲಾ ಹತ್ತು ಸಾವಿರ ರೂ. ದಂಡ ವಿಧಿಸಲಾಗಿದೆ. ವಿವಿಧ ಸಂಸ್ಥೆಗಳು, ಪ್ರವಾಸಿ ತಾಣಗಳು ಮತ್ತು ನದಿ ದಡದಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಗಳ ತಪಾಸಣೆ ನಡೆಸಲಾಯಿತು. ಕೋಡೋಂ ಬೇಲೂರು ಪಂಚಾಯಿತಿಯಲ್ಲಿ ಬನ್ ಬೇಕರಿಯೊಂದರಲ್ಲಿ ಪ್ಲಾಸ್ಟಿಕ್ ಉತ್ಪನ್ನದ ನಿರ್ಲಕ್ಷ್ಯದ ನಿರ್ವಹಣೆಗಾಗಿ 5000 ರೂ. ದಂಡ ವಿಧಿಸಲಾಯಿತು. ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುವ ಸಂಭವವಿರುವ ಸಂಸ್ಥೆಗಳು ಮತ್ತು ಕಾಟೇಜುಗಳಲ್ಲಿ ತಪಾಸಣೆ ನಡೆಸಲಾಯಿತು. ಜಿಲ್ಲೆಯ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಎನ್‍ಫೋರ್ಸ್‍ಮೆಂಟ್ ಸ್ಕ್ವೇಡ್ ನಾಯಕ ಕೆ.ವಿ.ಮುಹಮ್ಮದ್ ಮದನಿ ನೇತೃತ್ವ ವಹಿಸಿದ್ದರು. ಸ್ಕ್ವಾಡ್ ಸದಸ್ಯ ಎಂ.ಸನಲ್, ಈಸ್ಟ್‍ಎಳೇರಿ ಗ್ರಾ.ಪಂ. ಸಿಬ್ಬಂದಿ ಅರುಣ್ ರಾಜ್, ಕೋಡೋಂ ಬೇಲೂರು ಗ್ರಾಮ ಪಂಚಾಯಿತಿ ಸಿಬ್ಬಂದಿಪಿ.ಅನೀಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.