ಕುಂಬಳೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಎರಡೂವರೆ ದಶಕಗಳ ಕಾಲ ಅವಿರತ ಶ್ರಮಿಸಿ ಯೋಜನೆಯನ್ನು ವಿಶ್ವಮಟ್ಟಕ್ಕೆ ತಲುಪಿಸುವಲ್ಲಿ, ಹಲವಾರು ಪ್ರಶಸ್ತಿಗಳನ್ನು ಪಡೆಯುವಲ್ಲಿ, ಸಾವಿರಾರು ಕಾರ್ಯಕರ್ತರನ್ನು ಬೆಳೆಸುವಲ್ಲಿ, ಅತ್ಯಮೂಲ್ಯ ಮಾಹಿತಿ ಮಾರ್ಗದರ್ಶನವನ್ನು ನೀಡಿ, ಪರಮಪೂಜ್ಯ ಹೆಗ್ಗಡೆ ದಂಪತಿಗಳ ಅನುಗ್ರಹ ಆಶೀರ್ವಾದದೊಂದಿಗೆ ಅವರ ಆಶಯಗಳನ್ನು ಜನತೆಗೆ ತಲುಪಿಸುವಲ್ಲಿ ಕಾರಣಕರ್ತರಾಗಿ, ಜನಜಾಗೃತಿ ವೇದಿಕೆಯ ಸಂಚಾಲಕರಾಗಿ, ಟ್ರಸ್ಟಿಗಳಾಗಿ ವೇದಿಕೆಯ ಕಾರ್ಯಚಟುವಟಿಕೆಗಳಿಗೆ ಹೊಸ ರೂಪ ಕೊಟ್ಟು, ಅಪೂರ್ವ ಕಾರ್ಯನಿರ್ವಾಹಕ ನಿರ್ದೇಶಕರಾಗಿ, ನೇರ ದಿಟ್ಟ ನಡೆ-ನುಡಿ, ಸಮಯಪಾಲನೆ, ಕರ್ತವ್ಯಪ್ರಜ್ಞೆಯಿಂದ ಎಲ್ಲರ ಮನಗೆದ್ದು ಇದೀಗ ಹುದ್ದೆಯಿಂದ ನಿವೃತ್ತಿ ಹೊಂದುತ್ತಿರುವ ಡಾ.ಎಲ್. ಎಚ್. ಮಂಜುನಾಥ್ ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜರಗಿದ ಯೋಜನೆಯಿಂದ ಬೀಳ್ಕೊಡುವ ವಿದಾಯ ಸಮಾರಂಭದಲ್ಲಿ ಕಾಸರಗೋಡು ಜಿಲ್ಲೆಯ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಾ ಡಿ ವೀರೇಂದ್ರ ಹೆಗ್ಗಡೆ ದಂಪತಿಗಳ ಉಪಸ್ಥಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪುತ್ತೂರು, ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಅಧ್ಯಕ್ಷ ಡಾ ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕಾಸರಗೋಡು ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‍ಬಾಗ್, ಯೋಜನಾಧಿಕಾರಿ ಭಾಸ್ಕರ್ ಆಚಾರ್ಯ ಉಪಸ್ಥಿತರಿದ್ದರು.