ಚೆನ್ನೈ: ಲೋಕಸಭಾ ಚುನಾವಣೆ ಪ್ರಚಾರ ಮುಗಿಸಿ ವಿಶ್ರಾಂತಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಬೆಳಿಗ್ಗೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಮೆಮೊರಿಯಲ್‌ನ ಧ್ಯಾನ ಮಂಟಪದಲ್ಲಿ ಧ್ಯಾನಾಸಕ್ತರಾದರು.
ಚೆನ್ನೈ: ಲೋಕಸಭಾ ಚುನಾವಣೆ ಪ್ರಚಾರ ಮುಗಿಸಿ ವಿಶ್ರಾಂತಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಬೆಳಿಗ್ಗೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಮೆಮೊರಿಯಲ್‌ನ ಧ್ಯಾನ ಮಂಟಪದಲ್ಲಿ ಧ್ಯಾನಾಸಕ್ತರಾದರು.
ಅವರು ಧ್ಯಾನ ಮಾಡುವ ವಿಡಿಯೊವನ್ನು ಬಿಜೆಪಿ ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದೆ.
ಖಾವಿ ಬಟ್ಟೆ ತೊಟ್ಟು, ಹಣೆಗೆ ವಿಭೂತಿ ಹಚ್ಚಿ, ಕೈಯಲ್ಲಿ ಜಪಮಣಿ ಹಿಡಿದುಕೊಂಡು ಸ್ವಾಮಿ ವಿವೇಕಾನಂದರ ಪ್ರತಿಮೆ ಮುಂದೆ ಪ್ರಧಾನಿ ಧ್ಯಾನ ಮಗ್ನರಾಗಿದ್ದಾರೆ.
ಇಲ್ಲಿಯೇ ಸ್ವಾಮಿ ವಿವೇಕಾನಂದ ಅವರು ಧ್ಯಾನ ಮಾಡಿದ್ದರು.
ಧ್ಯಾನಕ್ಕೂ ಮುನ್ನ ಕನ್ಯಾಕುಮಾರಿಯ ಭಗವತಿ ಅಮ್ಮನ್ ದೇಗುಲದಲ್ಲಿ ಅರ್ಘ್ಯ ಅರ್ಪಿಸಿದರು.
ಜೂನ್ ಒಂದರವರೆಗೆ ಅವರು ಇಲ್ಲಿ ಧ್ಯಾನ ಮಾಡಲಿದ್ದಾರೆ. 45 ಗಂಟೆಗಳ ದೀರ್ಘ ಧ್ಯಾನ ಅವರದ್ದಾಗಿರಲಿದೆ ಎಂದು ಬಿಜೆಪಿ ಬರೆದುಕೊಂಡಿದೆ.