ತೈಪೇಯಿ: ದ್ವೀಪ ರಾಷ್ಟ್ರ ತೈವಾನ್‌ನ ಹೊಸ ನಾಯಕತ್ವದ ಆಯ್ಕೆಗೆ ಪ್ರತಿಕ್ರಿಯೆಯಾಗಿ ಸತತ ಎರಡನೇ ದಿನವಾದ ಶುಕ್ರವಾದ ಸಹ ತನ್ನ ಕರಾವಳಿಯ ಉದ್ದಕ್ಕೂ ಚೀನಾದ ಹತ್ತಾರು ಯುದ್ಧ ವಿಮಾನಗಳು ಮತ್ತು ನೌಕಾದಳದ ಹಡುಗುಗಳು ಜಮಾವಣೆಗೊಂಡಿರುವುದನ್ನು ತೈವಾನ್ ಪತ್ತೆ ಮಾಡಿದೆ.

ತೈವಾನ್ ಅನ್ನು ತನ್ನ ಪಡೆಗಳು ಸುತ್ತುವರೆದಿರುವುದರ ಬಗ್ಗೆ ಚೀನಾದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ ಮಿಲಿಟರಿ ವಿಭಾಗವಾದ ದಿ ಪೀಪಲ್ಸ್ ಲಿಬರೇಷನ್ ಆರ್ಮಿ ವ್ಯಾಪಕ ಪ್ರಕಟಣೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.
ಚೀನಾದ ಪಡೆಗಳು ತೈವಾನ್‌ನ್ನು ಎಲ್ಲ ದಿಕ್ಕುಗಳಿಂದ ಸುತ್ತುವರೆದಿರುವುದನ್ನು ಮತ್ತು ತೈವಾನ್ ಸಂಪೂರ್ಣ ಚೀನೀ ಪಡೆಗಿಂದ ಆವೃತ್ತವಾಗಿರುವುದನ್ನು ಹೊಸ ವಿಡಿಯೋ ಒಂದು ಅನಿಮೇಟೆಡ್ ರೀತಿ ಪ್ರದರ್ಶಿಸಿದೆ.
ಇದರ ಜೊತೆಗೆ 1949ರ ಕಹಿ ಮತ್ತು ರಕ್ತಸಿಕ್ತ ನಾಗರಿಕ ಸಮರದ ಬಳಿಕ ತೈವಾನ್‌ನ 23 ದಶಲಕ್ಷ ಜನತೆಗೆ ಅಪಾಯ ಸಂಭವಹಿಸಬಹುದೆಂದು ಆತಂಕ ವ್ಯಕ್ತವಾಗಿದೆ. ತೈವಾನ್‌ನ ಸಂಸತ್ತು ಶುಕ್ರವಾರ ನೀತಿ ನಿರೂಪಣಾ ಕ್ರಮಗಳನ್ನು ಕೈಗೊಂಡ ಬಗ್ಗೆ ರಾಜಕೀಯ ಪಕ್ಷಗಳ ವಾಗ್ವಾದಗಳಲ್ಲಿ ಮುಳುಗಿತ್ತು. ತೈಪೇಯಿಯ ಉದ್ವಿಗ್ನ ರಾಜಧಾನಿಯಲ್ಲಿ ಸಂಸದೀಯ ಕಲಾಪ ಎಂದಿನಂತೆ ಸಾಗಿತ್ತು.
ತಯವಾನ್ ಹಿಡಿತಲ್ಲಿರುವ ದ್ವೀಪ ಸಮುದಾಯಗಳಲ್ಲಿ ಸಾಗರ ನೌಕೆಗಲು ಭೂಮಿಯಿಂದ ಭೂಮಿಗೆ ನೆಗೆಯುವ ಕ್ಷಿಪಣಿಗಳು ಮತ್ತು ಕರಾವಳಿ ಕಾವಲು ಪಡೆಯನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ.