ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದ ಪ್ರತಿಷ್ಠಿತ ಶಿವಶಕ್ತಿ ಪೆರಡಾಲ ಇದರ ವಾರ್ಷಿಕ ಸಭೆ ಕ್ಷೇತ್ರದ ಸಭಾಭವನದಲ್ಲಿ ಜರಗಿತು.
ಸಭೆಯಲ್ಲಿ ವಾರ್ಷಿಕ ವರದಿ ಲೆಕ್ಕಪತ್ರ ಮಂಡಿಸಲಾಯಿತು. ಮುಂದಿನ ಕಾರ್ಯ ಯೋಜನೆ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ನೂತನ ಸಮಿತಿ ರೂಪಿಕರಿಸಲಾಯಿತು. ಗೌರವಾಧ್ಯಕ್ಷರಾಗಿ ಗೋಪಾಲಕೃಷ್ಣ (ಬಾಲಣ್ಣ), ಅಧ್ಯಕ್ಷರಾಗಿ ಭಾಸ್ಕರ ಪಂಜಿತ್ತಡ್ಕ, ಕಾರ್ಯದರ್ಶಿಯಾಗಿ ಪುಟ್ಟ ನಾಯ್ಕ ಪೆರಡಾಲ, ಜೊತೆ ಕಾರ್ಯದರ್ಶಿಯಾಗಿ ಪ್ರವೀಣ ಪೆರಡಾಲ, ಕೋಶಾಧಿಕಾರಿಯಾಗಿ ನವೀನ್ ಕುಮಾರ್ ಪೆರಡಾಲ, ಸಹ ಕೋಶಾಧಿಕಾರಿಯಾಗಿ ಸತೀಶ್ ಭಟ್ ಪುದ್ಯೋಡು ಅವರನ್ನು ಆರಿಸಲಾಯಿತು.