ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋಓಪರೇಟಿವ್ ಸೊಸೈಟಿಂiÀಲ್ಲಿ ನಡೆದಿರುವ ಬಹುಕೋಟಿ ಹಗರಣದಲ್ಲಿ ಸಿಪಿಎಂ, ಹಿಂದಿನ ಆಡಳಿತ ಮಂಡಳಿ ಹಾಗೂ ಹಾಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಲಂ 65ರ ಪ್ರಕಾರ ಕೇಸು ದಾಖಲಿಸಿ, ತನಿಖೆ ನಡೆಸಿ ಆರೋಪಿಗಳನ್ನು ಜೈಲಿಗಟ್ಟಲು ಹಾಗೂ ಠೇವಣಿದಾರರಿಗೆ ಹಣ ವಾಪಾಸು ಮಾಡುವಂತೆ ಒತ್ತಾಯಿಸಿ ಐಕ್ಯರಂಗ ಕಾರಡ್ಕ ಮಂಡಲ ಸಮಿತಿ ವತಿಯಿಂದ ಮುಳ್ಳೇರಿಯ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ಆರೋಪಿಗಳನ್ನು ರಕ್ಷಿಸುವಲ್ಲಿ ಸಿಪಿಎಂ ನಾಯಕತ್ವ ಮತ್ತು ಸಹಕಾರಿ ಇಲಾಖೆ ನೌಕರರು ಸಹಕಾರ ನೀಡುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಐಕ್ಯರಂಗ ಆಗ್ರಹಿಸಿದೆ.
ಮುಳ್ಳೇರಿಯ ಪೇಟೆಯಲ್ಲಿ ಐಕ್ಯರಂಗ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಐಕ್ಯರಂಗ ಅಧ್ಯಕ್ಷ ಹಮೀದ್ ಇ.ಆರ್ ಅಧ್ಯಕ್ಷತೆ ವಹಿಸಿದ್ದರು .
ಮುಖಂಡರಾದ ವಿ.ಗೋಪಕುಮಾರ್, ಆಯ್ರ್ಕಾಡ್ ಶ್ರೀಧರನ್, ಹನೀಫಾ, ಎ.ಪಿ., ಇಕ್ಬಾಲ್, ಮೊಯ್ದೀನ್ ಕುಞÂ, ಸತ್ತಾರ್, ಹಮೀದ್, ಮುಹಮ್ಮದ್‍ಕುಞÂ, ಇ.ಎ.ಸಿದ್ಧೀಕ್ ಬೆಳ್ಳಿಪಾಡಿ, ರಂಜಿತ್ ಕುಮಾರ್, ಗೋಪಾಲನ್ ಎಸ್.ಕೆ., ಶಾರದ, ಇಬ್ರಾಹಿಂ ಹಾಜಿ, ಪ್ರಭಾ, ರೂಪಾ, ಗುರುಪ್ರಸಾದ್ ಮತ್ತಿತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಪುರುಷೋತ್ತಮನ್ ಕಾಡಗಂ ಸ್ವಾಗತಿಸಿ, ವಂದಿಸಿದರು.