ಕಣ್ಣೂರು: ತಲಶ್ಶೇರಿ ಸರ್ಕಾರಿ ಚಿಲ್ಡ್ರನ್ಸ್ ಹೋಮ್‍ನಿಂದ ಡ್ರೀಮ್ಸ್ ಓಪನ್ ಶೆಲ್ಟರ್ ಹೋಮ್‍ಗೆ ಸ್ಥಳಾಂತರಗೊಂಡ 17ರ ಹರೆಯದ ವಿವೇಕ್.ಕೆ ಎಂಬ ಬಾಲಕ ಆಶ್ರಯ ಮನೆಯಿಂದ ನಾಪತ್ತೆಯಾಗಿರುವ ಬಗ್ಗೆ ಕಣ್ಣೂರು ಟೌನ್ ಪೆÇಲೀಸ್ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದರೆ.
ಚಿಲ್ಡ್ರನ್ಸ್ ಹೋಮ್‍ನಿಂದ ಹೊರಟಿದ್ದ ವಿವೇಕ್ ಮನೆಗೆ ಅಥವಾ ಡ್ರೀಮ್ಸ್ ಓಪನ್ ಶೆಲ್ಟರ್ ಮನೆಗೆ ವಾಪಸಾಗಿಲ್ಲ. ಬಾಲಕ 160 ಸೆಂ.ಮೀ ಎತ್ತರ, ಮಧ್ಯದ ಬೆರಳಿನ ಮೇಲೆ ಕಪ್ಪು ಮಚ್ಚೆಯೊಂದಿಗೆ ಕಪ್ಪು ಬಣ್ಣ ಹೊಂದಿದ್ದು, ಈತನ ಬಗ್ಗೆ ಮಾಹಿತಿ ಲಭಿಸಿದವರು ದೂರವಾಣಿ ಸಂಖ್ಯೆ(0497 2763337, 949787203)ಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.