ಆರೋಗ್ಯಕರ ದೇಹಕ್ಕೆ ನಿದ್ರೆ ಮುಖ್ಯ. ಆದರೆ ನಿದ್ರೆ ಎಂದರೆ ಅನೇಕರು ನಿರ್ಲಕ್ಷ್ಯ ಮಾಡುತ್ತಾರೆ. ಬೆಳಗಾಗುವವರೆಗೆ ಮೊಬೈಲ್ ಪೋನ್ ಬಳಸಿ ಬಳಿಕ ಮುಂಜಾನೆ ನಿದ್ರಿಸುವ ಪರಿಪಾಠ ಇತ್ತೀಚೆಗೆ ಹೆಚ್ಚಿನವರ ಅಭ್ಯಾಸ.
ಪರಿಣಾಮವಾಗಿ, ನಾವು ಮರುದಿನ ನಿದ್ರೆಯ ಅಮಲಿನೊಂದಿಗೆ ಎಚ್ಚರಗೊಳ್ಳುತ್ತೇವೆ. ದೇಹಕ್ಕೆ ನಿದ್ರೆ ಅತ್ಯಗತ್ಯ. ಇಲ್ಲದಿದ್ದರೆ ಗಂಭೀರ ಸಮಸ್ಯೆಗಳು ನಿಸ್ಸಂದೇಹವಾಗಿ ಎದುರಾಗುತ್ತದೆ.
ನಿದ್ರೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಪೋಸ್ಟ್ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿದೆ. ಒಂದು ಗಂಟೆ ಮುಂಚೆಯೇ ನಿದ್ದೆ ಕಳೆದುಕೊಂಡರೆ ಕಷ್ಟಗಳಿಂದ ಮುಕ್ತಿ ಹೊಂದಲು ನಾಲ್ಕು ದಿನ ಬೇಕು ಎಂದು ಹೈದರಾಬಾದ್ ನ ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ಡಾ. ಸುಧೀರ್ ಕುಮಾರ್ ಶೇರ್ ಮಾಡಿರುವ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ನಿದ್ರೆಯ ಅಭಾವದ ಪರಿಣಾಮಗಳ ಮೇಲೆ ಬೆಳಕು ಚೆಲ್ಲಿದೆ. ನಿದ್ರೆಯ ಅಭಾವವು ದಿನಗಳ ಕಾಲ ತಲೆನೋವು, ಕಳಪೆ ಏಕಾಗ್ರತೆ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಅನೇಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ನೀವು ಎಷ್ಟು ಸಮಯ ಮಲಗಬೇಕು ಎಂಬುದು ನಿಮ್ಮ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಜ್ಞರು ಸೂಚಿಸುತ್ತಾರೆ.