ಬದಿಯಡ್ಕ: ಅನ್ಯ ಮತೀಯ ಯುವಕನೊಂದಿಗೆ ಪರಾರಿಯಾದ ಖಾಸಗಿ ವಿದ್ಯಾಸಂಸ್ಥೆಯ ಶಿಕ್ಷಕಿ ಪ್ರಿಯತಮನೊಂದಿಗೆ ಇಂದು ಪೋಲೀಸ್ ಠಾಣೆಯಲ್ಲಿ ಶರಣಾಗಿದ್ದಾಳೆ. ಬಳಿಕ ಮೆಜಿಸ್ಟ್ರೇಟರ ಮುಂದೆ ಹಾಜರುಪಡಿಸಿದಾಗ ಯುವತಿಯನ್ನು ಸ್ವ ಇಚ್ಚೆಯಂತೆ ಬಿಡಲಾಯಿತು. ಇದರಿಂದ ಯುವತಿ ಪ್ರಿಯತಮನೊಂದಿಗೆ ತೆರಳಿದಳು.
ಪಿಲಾಂಕಟ್ಟೆ ಕೋಳಾರಿಯ ನೇಹಾ (25) ಎಂಬಾಕೆ ನೆಕ್ರಾಜೆ ಮಾಳಂಗೈಯ ಮಿರ್ಶಾದ್ (25)ನ ಜೊತೆಗೆ ಕಳೆದ ಗುರುವಾರ ಪರಾರಿಯಾಗಿದ್ದಳು. ನೇಹಾಳ ತಂದೆಯ ದೂರಿನಂತೆ ಬದಿಯಡ್ಕ ಪೋಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾಗ ಅವರಿಬ್ಬರು ಮದುವೆ ಯಾಗಲಿದ್ದಾರೆಂದು ತಿಳಿಸಿ ರಿಜಿಸ್ಟಾರ್ ಕಾರ್ಯಾಲಯದ ಬೋರ್ಡ್‍ನಲ್ಲಿ ಭಾವಚಿತ್ರಗಳ ಸಹಿತ ನೋಟೀಸು ಲಗತ್ತಿಸಲಾಗಿತ್ತು. ನಾಪತ್ತೆಯಾದ ನೇಹಾ ಹಾಗೂ ಮಿರ್ಶಾದ್ ನನ್ನು ಪತ್ತೆಹಚ್ಚಲು ಪ್ರಯತ್ನ ನಡೆಯುತ್ತಿರುವಂತೆ ನಿನ್ನೆ ಬೆಳಿಗ್ಗೆ ಅವರಿಬ್ಬರು ನ್ಯಾಯವಾದಿಯ ಮುಖಾಂತರ ಬದಿಯಡ್ಕ ಪೋಲೀಸ್ ಠಾಣೆಯಲ್ಲಿ ಹಾಜರಾಗಿದ್ದಾಳೆಂದು ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ಜನರು ಗುಂಪುಗೂಡಿದ್ದರು. ಇದರಿಂದ ಕಾಞಂಗಾಡ್ ಪೆÇಲೀಸ್ ಠಾಣೆಯಲ್ಲಿ ಶರಣಾಗಲು ಅವರು ನಿರ್ಧರಿಸಿದ್ದರು.
ನ್ಯಾಯವಾದಿಯ ಮುಖಾಂತರ ನೇಹಾ ಹಾಗೂ ಮಿರ್ಶಾದ್ ನಿನ್ನೆ ಸಂಜೆ ಪೋಲೀಸ್ ಠಾಣೆಯಲ್ಲಿ ಹಾಜರಾಗಿದ್ದಾರೆ. ವಿಷಯ ತಿಳಿದು ಅಲ್ಲಿಗೂ ಹಲವರು ತಲುಪಿದ್ದರು. ಈ ವೇಳೆ ಪೋಲೀಸರೊಂದಿಗೆ ವಾಗ್ವಾದ ನಡೆಯಿತು. ಈಮಧ್ಯೆ ನೇಹಾಳ ಹೇಳಿಕೆ ದಾಖಲಿಸಿಕೊಂಡ ಬಳಿಕ ಭಾರೀ ಪೋಲೀಸ್ ಬಂದೋಬಸ್ತ್ ನೊಂದಿಗೆ ಮೆಜಿಸ್ಟ್ರೇಟರ ಮನೆಯಲ್ಲಿ ಹಾಜರುಪಡಿಸಲಾಯಿತು.