ಅದಕ್ಕೂ ಮುನ್ನ ಎಕ್ಸ್/ಟ್ವಿಟರ್ ವೇದಿಕೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಈ ಚುನಾವಣೆಗಳಲ್ಲಿ ಒಡಿಶಾ ಇತಿಹಾಸ ನಿರ್ಮಿಸಲಿದೆ ಎಂಬುದು ಸ್ಪಷ್ಟ' ಎಂದಿದ್ದಾರೆ.
ರಾಜ್ಯ ರಾಜಧಾನಿಯಲ್ಲಿ ಶುಕ್ರವಾರ ನಡೆಸಿದ ರೋಡ್ ಶೋ ದೃಶ್ಯಗಳನ್ನೂ ಅವರು ಹಂಚಿಕೊಂಡಿದ್ದಾರೆ.
ಪ್ರಚಾರದ ವೇಳೆ ಮೋದಿ, ಒಡಿಶಾದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಒಡಿಶಾದಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ಸರ್ಕಾರವು ಜನರೊಂದಿಗೆ ಸಂಪರ್ಕ ಕಡಿದುಕೊಂಡಿದೆ ಎಂದು ಆರೋಪಿಸಿದ್ದ ಮೋದಿ, ರಾಜ್ಯದ ಜನರೊಂದಿಗಿನ ತಮ್ಮ ಸಂಬಂಧವು ಭಾಷೆಯ ವ್ಯತ್ಯಾಸವನ್ನೂ ಮೀರಿ ನಿಕಟವಾಗಿದೆ ಎಂದಿದ್ದರು.
'ರಾಜ, ಮಹಾರಾಜರ ಕಾಲದಲ್ಲಿಯೂ, ಆಡಳಿತಗಾರರು ಮತ್ತು ಗ್ರಾಮೀಣ ಜನರು, ಸಾಮಾನ್ಯರ ನಡುವೆ ಬಾಂಧವ್ಯ ಇರುತ್ತಿತ್ತು. ಅದು ಈಗ ಒಡಿಶಾದಲ್ಲಿ ಸಂಪೂರ್ಣವಾಗಿ ಮಾಯವಾಗಿದೆ' ಎಂದು ಕಿಡಿಕಾರಿದ್ದರು.