ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ ಸರ್ಪಂಗಳ ಅಂಗನವಾಡಿಯಲ್ಲಿ ಸುದೀರ್ಘ ಕಾಲ ಸಹಾಯಕಿಯಾಗಿ ಸೇವೆಗೈದು ನಿವೃತ್ತರಾಗುತ್ತಿರುವ ಸುನಂದ ವೈ ಅವರಿಗೆ ಅಂಗನವಾಡಿ ರಕ್ಷಕರ ಹಾಗೂ ಊರವರ ಪರವಾಗಿ ಬೀಳ್ಕೊಡುಗೆ ಸಮಾರಂಭ ಜರಗಿತು.
ಗ್ರಾ.ಪಂ. ಸದಸ್ಯೆ ಹಾಗೂ ಅಂಗನವಾಡಿ ಅಧ್ಯಾಪಕಿ ಕುಸುಮಾವತಿ ಟೀಚರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಾ.ಕಿಶೋರ್ ಕುಮಾರ್ ರೈ ಶೇಣಿ ಅಭಿನಂದನಾ ಭಾಷಣಗೈದರು. ಜ್ಯೂನಿಯರ್ ಹೆಲ್ತ್ ಇನ್ಸ್ ಪೇಕ್ಟರ್ ಸಜಿತ್, ಬಣ್ಪುತ್ತಡ್ಕ ಶಾಲಾ ಮುಖ್ಯೋಪಾಧ್ಯಾಯ ಸಾಜು ಟಿ.ವಿ, ಐಸಿಡಿಎಸ್ ಮೇಲ್ವಿಚಾರಕಿ ಪ್ರೇಮಲತಾ, ಸಾಮಾಜಿಕ ಮುಂದಾಳು ಸಂಶುದ್ದೀನ್, ಗ್ರಾ.ಪಂ.ಮಾಜಿ ಸದಸ್ಯ ಶಂಕರ ಎಂ.ಎಸ್, ಭವಾನಿ ವೈ, ವಂದಿತಾ ಬಿ ಮೊದಲಾದವರು ಮಾತನಾಡಿದರು.ಅಂಗನವಾಡಿ ಮಕ್ಕಳು ಪ್ರಾರ್ಥನೆಗೈದರು. ಸಿಡಿಎಸ್ ಸದಸ್ಯೆ ಸರಸ್ವತಿ ವಂದಿಸಿದರು.