ಕಣ್ಣೂರು: ವಿಸ್ಮಯ ವಾಟರ್ ಥೀಮ್ ಪಾರ್ಕ್‍ನಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕನನ್ನು ಬಂಧಿಸಲಾಗಿದೆ.
ಪಳೆಯಂಗಡಿ ಎರಿಪುರಂ ಮೂಲದ ಬಿ.ಇಫ್ತಿಕಾರ್ ಅಹಮದ್ (51) ಬಂಧಿತ ಆರೋಪಿ. ಉದ್ಯಾನವನದಲ್ಲಿರುವ ವೇವ್ ಪೂಲ್ ನಲ್ಲಿ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ದೂರಿನ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ಶಂಕಿತ ಆರೋಪಿ ಕಾಸರಗೋಡು ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾಗಿದ್ದು, ಆರೋಪಿಯನ್ನು ತಳಿಪರಂಬ ಪೋಲೀಸರು ಎರಡು ವಾರಗಳ ಕಸ್ಟಡಿಗೆ ನೀಡುವಂತೆ ನ್ಯಾಯಾಲಯ ಒತ್ತಾಯಿಸಿದೆ. ಪಾರ್ಕ್‍ನ ವೇವ್ ಪೂಲ್‍ನಲ್ಲಿ ಇಫ್ತಿಕರ್ ಅಹ್ಮದ್ ಮಲಪ್ಪುರಂ ಮೂಲದ 22 ವರ್ಷದ ಸ್ತ್ರೀಯೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ಹೇಳಲಾಗಿದೆ. ಸ್ತ್ರೀ ಗುಲ್ಲೆಬ್ಬಿಸಿದ ಬಳಿಕ ಪಾರ್ಕ್ ಅಧಿಕಾರಿಗಳು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಈತನ ವಿರುದ್ಧ ಮಹಿಳಾ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿಯ ಮೇಲಿನ ಲೈಂಗಿಕ ದೌರ್ಜನ್ಯದ ದೂರಿನ ಮೇರೆಗೆ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ವರ್ಷ ನವೆಂಬರ್‍ನಲ್ಲಿ ಇದೇ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ಪಿಜಿ ಮೊದಲ ಸೆಮಿಸ್ಟರ್ ವಿದ್ಯಾರ್ಥಿನಿ ಮೇಲೆ ಇದೇ ವ್ಯಕ್ತಿ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂಬ ದೂರು ದಾಖಲಾಗಿತ್ತು. ಇದರ ಬೆನ್ನಲ್ಲೇ ಪ್ರಾಧ್ಯಾಪಕರನ್ನು ಅಮಾನತು ಮಾಡಿ ಹೆಚ್ಚಿನ ತನಿಖೆ ನಡೆಸಲಾಗಿತ್ತು. ನಂತರ, ಅವರು ಕೆಲಸಕ್ಕೆ ಮರಳಿದಾಗ ಅನೇಕ ಪ್ರತಿಭಟನೆಗಳು ನಡೆದವು.