ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿ ಶ್ರೀಧರ್ಮ ದೈವಗಳ ವಾರ್ಷಿಕ ನೇಮೋತ್ಸವ ಶನಿವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಶುಕ್ರವಾರ ಸಂಜೆ ಸಾಂಪ್ರದಾಯಿಕ ಪ್ರಾರ್ಥನೆ, ಪೂಜೆ, ತೊಡಂಙಲ್, ಭಂಡಾರ ಪ್ರಧಾನ, ಅನ್ನದಾನ ನಡೆಯಿತು. ಬಳಿಕ ಶನಿವಾರ ಮುಂಜಾನೆ ಈರ್ವರು ಉಳ್ಳಾಕ್ಲು ದೈವದ ನೇಮ, ಶ್ರೀಧೂಮಾವತಿ ನೇಮ ಮತ್ತು ಶ್ರೀಧರ್ಮದೈವ(ಪಂಜುರ್ಲಿ) ನೇಮ ಪ್ರಸಾದ ವಿತರಣೆ ನಡೆಯಿತು. ಜೊತೆಗೆ ವಿವಿಧ ಉಪ ದೈವಗಳ ಕೋಲ ನಡೆಯಿತು. ಶುಕ್ರವಾರ ರಾತ್ರಿ ಹಾಗೂ ಶನಿವಾರ ಮಧ್ಯಾಹ್ನ ಅನ್ನದಾನ ನಡೆಯಿತು. ಪುದುಕೋಳಿ ಶ್ರೀಕೃಷ್ಣ ಭಟ್, ಶಂಕರ ಭಟ್, ಗೋವಿಂದ ಭಟ್, ಗಣೇಶ್ ಭಟ್ ನೇತೃತ್ವ ವಹಿಸಿದ್ದರು. ಊರ ಪರವೂರ ಭಕ್ತರು ಪಾಲ್ಗೊಂಡಿದ್ದರು.
ಚಿತ್ರ ಮಾಹಿತಿ: ಧರ್ಮದೈವದ ನೇಮ-ಪಾತ್ರಿಯಾಗಿ ಶಿವರಾಮ ಗೋಳಿಯಡ್ಕ,