ಮಂಜೇಶ್ವರ : ಮಂಜೇಶ್ವರ ಶ್ರೀ ಅನಂತೇಶ್ವರ ದೇವಳದ ಶಾಲೆಗಳ ಶತಮಾನೋತ್ಸವ ಸಂಭ್ರಮ-2025ರ ಅಂಗವಾಗಿ ವರ್ಷಪೂರ್ತಿ ಕಾರ್ಯಕ್ರಮ ಹಾಗೂ ಅನಂತ ವಾಚನಾಲಯ, ಕಂಪ್ಯೂಟರ್ ಲ್ಯಾಬ್‍ನ ಉದ್ಘಾಟನೆ ಮೇ 6ರಂದು ಬೆಳಗ್ಗೆ 9.30ಕ್ಕೆ ಎಸ್.ಎ.ಟಿ ಶಾಲಾ ಸಭಾಂಗಣದಲ್ಲಿ ಜರುಗಲಿದೆ.
ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಸಮಾರಂಭ ಉದ್ಘಾಟಿಸಿ ಶತಮಾನೋತ್ಸವ ಸಮಾರಂಭದ ಮನವಿ ಪತ್ರ ಬಿಡುಗಡೆಗೊಳಿಸುವರು. ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಸಿ.ಎ ಸುನಿಲ್ ಭಟ್ ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ಶ್ರೀಮದನಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ. ಗಣಪತಿ ಪೈ ಶತಮಾನೋತ್ಸವ ಗೀತೆ ಧ್ವನಿಸುರುಳಿ ಬಿಡುಗಡೆಗೊಳಿಸಿ, ದೀಪ ಪ್ರಜ್ವಲನೆ ನಡೆಸುವರು. ನಿವೃತ್ತ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ನಂದಿಕೇಶನ್ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸುವರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ. ಅನಂತ ವಾಚನಾಲಯ ಉದ್ಘಾಟಿಸುವರು. 11.30ರಿಂದ ಇವಿಧ ಮನೋರಂಜನಾ ಕಾರ್ಯಕ್ರಮ ಜರುಗಲಿರುವುದು. ಶಾಲಾ ಶತಮಾನೋತ್ಸವ ಅಂಗವಾಗಿ ವರ್ಷಪೂರ್ತಿ ಕಾರ್ಯಕ್ರಮ ಜರುಗಲಿರುಉದಾಗಿ ಪ್ರಕಟಣೆ ತಿಳಿಸಿದೆ.