ಉಪ್ಪಳ: ಉಪ್ಪಳ ಟೌನ್ ಅಂಗನವಾಡಿಯಲ್ಲಿ ಹಲವಾರು ವರ್ಷಗಳಿಂದ ಅಂಗನವಾಡಿಯ ಸಹಾಯಕಿಯಾಗಿ ಸೇವೆ ಸಲ್ಲಿಸಿದ ಲೀಲಸೇಸಮ್ಮ ಅವರ ವಿದಾಯಕೂಟವು ಇತ್ತೀಚೆಗೆ ನಡೆಯಿತು. ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ಶರೀಫ್ ಟಿ.ಎಮ್ ಉದ್ಘಾಟಿಸಿದರು. ಮುಳಿಂಜ ಜಿ.ಎಲ್.ಪಿ ಶಾಲೆಯ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಶುಭ ಹಾರೈಸಿದರು. ನಿವೃತ್ತರಾಗುತ್ತಿರುವ ಲೀಲಾಸೇಸಮ್ಮ ಅವರಿಗೆ ಫಲಪುಷ್ಪ, ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಅಂಗನವಾಡಿಯ ಕಾರ್ಯಕರ್ತೆ ಆಶಾ.ಜಿ ಸ್ವಾಗತಿಸಿ,ವಂದಿಸಿದರು. ವೆಲ್ಪೇರ್ ಸಮಿತಿ ಸದಸ್ಯರು ಭಾಗವಹಿಸಿದರು.