ಪೆರ್ಲ: ಪೆರ್ಲ ಪಿಎಚ್‌ಸಿಯಲ್ಲಿ ಪಾಲಿಟೀವ್ ಕೇರ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸವಿತಾ ಎಂಬವರಿಗೆ ಕರ್ತವ್ಯ ನಿರ್ವಹಣೆಗೆ ಅರ್ಹತೆ ಇಲ್ಲದ ಕಾರಣ ಮರು ನೇಮಕ ಮಾಡದೆ ಸಂದರ್ಶನದ ಮೂಲಕ ಹೊಸಬರನ್ನು ಆಯ್ಕೆ ಮಾಡಿದ ಪಂಚಾಯಿತಿ ಆಡಳಿತ ಸಮಿತಿಯ ತೀರ್ಮಾನ ಸರಿಯಾಗಿದೆ ಎಂದು ಹೈಕೋರ್ಟ್ ಆದೇಶಿಸಿದೆ.
ಸಾಕಷ್ಟು ವಿದ್ಯಾರ್ಹತೆ ಇಲ್ಲದಿದ್ದರೂ ಈ ಶುಶ್ರೂಕಿಯನ್ನು ನೌಕರಿಯಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿ ಸಿಪಿಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು
ಪಂಚಾಯತ್ ಆಡಳಿತ ಸಮಿತಿಯ ನಿರ್ಧಾರದ ವಿರುದ್ಧ ಒಂಬುಡ್ಸ್ ಮನ್ ಅವರನ್ನು ಸಂಪರ್ಕಿಸಿ ಸವಿತಾ ಅವರನ್ನು ಮರು ನೇಮಕ ಮಾಡಲು ಅನುಕೂಲಕರ ಆದೇಶವನ್ನು ಪಡೆಯಲಾಗಿತ್ತು. ಇದರ ವಿರುದ್ಧ ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣವನ್ನು ವಿವರವಾಗಿ ಪರಿಶೀಲಿಸಿದ ನಂತರ ಹೈಕೋರ್ಟ್‌ನಿಂದ ಹಣಕಾಸಿನ ಅವ್ಯವಹಾರ ಕಂಡುಬಂದಲ್ಲಿ ಮಾತ್ರ ಈ ಬಗ್ಗೆ ಒಂಬುಡ್ಸ್‌ಮನ್ ಮಧ್ಯಸ್ಥಿಕೆ ವಹಿಸಬಹುದಾಗಿದ್ದು ನೇಮಕಾತಿ ಮತ್ತು ಅರ್ಹತಾ ಮಾನದಂಡಗಳಲ್ಲಿ ಮಧ್ಯಪ್ರವೇಶಿಸಲು ಒಂಬುಡ್ಸ್‌ಮನ್‌ಗೆ ಯಾವುದೇ ಅಧಿಕಾರವಿಲ್ಲ ಎಂದು ಹೈಕೋರ್ಟ್ ವಾದವನ್ನು ಎತ್ತಿ ಹಿಡಿದಿತ್ತು.
ಒಂಬುಡ್ಸ್‌ಮನ್ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್ ಪಂಚಾಯತ್ ಆಡಳಿತ ಸಮಿತಿಯ ನಿರ್ಧಾರವನ್ನು ಸರಿ ಎಂದು ಅಂಗೀಕರಿಸಿ ಆದೇಶ ಹೊರಡಿಸಿದೆ. ಭಾರೀ ರಾಜಕೀಯ ಕೋಲಾಹಲ ಸೃಷ್ಟಿಸಿದ್ದ ಪ್ರಕರಣದಲ್ಲಿ ಯುಡಿಎಫ್ ಪಂಚಾಯತ್ ಆಡಳಿತ ಸಮಿತಿಯ ತೀರ್ಪನ್ನು ಹೈಕೋರ್ಟ್ ಅಂಗೀಕರಿಸಿ ಸಿಪಿಎಂಗೆ ಹಿನ್ನಡೆಯಾಗಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.