ಕಾಸರಗೋಡು: ಇಂಡಿಯಾ ಪೆÇೀಸ್ಟ್ ಪೇಮೆಂಟ್ಸ್ ಬ್ಯಾಂಕ್, ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಸಮಗ್ರ ಅಪಘಾತ ರಕ್ಷಣಾ ಯೋಜನೆಯಾದ ಅಂತ್ಯೋದಯ ಶ್ರಮಿಕ್ ಸುರಕ್ಷಾ ಯೋಜನೆ (ಎ ಎಸ್‍ಎಸ್‍ವೈ) ವಿಮಾ ಪದ್ಧತಿಯನ್ನು ಪ್ರಾರಂಭಿಸಿದೆ. ಯೋಜನೆಗೆ ಸೇರ್ಪಡೆಗೊಳ್ಳಲು ರೂ.499 (ರೂ 10 ಲಕ್ಷದ ಕವರೇಜ್) ಮತ್ತು ರೂ 289 (ರೂ 5 ಲಕ್ಷದ ಕವರೇಜ್) ಕಂತು ಪಾವತಿಸಿ ಸದಸ್ಯತನ ಪಡೆಯಬಹುದಾಗಿದೆ.
ಮೋಟಾರು ಕ್ಷೇತ್ರದಲ್ಲಿ ಕೆಲಸ ಮಾಡುವ ಅಸಂಘಟಿತ ವಲಯದ ಕಾರ್ಮಿಕರಿಗೂ ಈ ಯೋಜನೆಯಲ್ಲಿ ಸದಸ್ಯರಾಗಬಹುದು. ಸದಸ್ಯತನ ಪಡೆಯಲು ಸಮೀಪದ ಅಂಚೆ ಕಚೇರಿ, ಅಂಚೆ ಅಧಿಕಾರಿ, ಅಥವಾ ಗ್ರಾಮೀಣ ಅಂಚೆಸೇವಕರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.