ಅಂಬಾಲ: ದೇವಸ್ಥಾನದ ಬಾಲ್ಕನಿ ಕುಸಿದು ಇಬ್ಬರು ಯುವತಿಯರು ಮೃತಪಟ್ಟು, ಮತ್ತೊಬ್ಬ ಯುವತಿ ಗಾಯಗೊಂಡಿರುವ ಘಟನೆ ಹರಿಯಾಣದ ಅಂಬಾಲದ ನಾನ್‌ಯೋಲಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಬಾಲ: ದೇವಸ್ಥಾನದ ಬಾಲ್ಕನಿ ಕುಸಿದು ಇಬ್ಬರು ಯುವತಿಯರು ಮೃತಪಟ್ಟು, ಮತ್ತೊಬ್ಬ ಯುವತಿ ಗಾಯಗೊಂಡಿರುವ ಘಟನೆ ಹರಿಯಾಣದ ಅಂಬಾಲದ ನಾನ್‌ಯೋಲಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವತಿಯರನ್ನು ಪಂಜಾಬ್‌ನ ತಸಲ್ಪುರ ಗ್ರಾಮದ ಮನೀಶಾ ದೇವಿ (19) ಮತ್ತು ಪರ್ಮಿಂದರ್ ಕೌರ್ (18) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ದೇವಿ ಮಂದಿರ ಆವರಣದಲ್ಲಿ ಎರಡು ತಿಂಗಳ ಹಿಂದೆಯಷ್ಟೇ ಬಾಲ್ಕನಿ ನಿರ್ಮಿಸಲಾಗಿತ್ತು. ದೇವಸ್ಥಾನದ ಬಳಿಯಿರುವ ಶಿಕ್ಷಣ ಸಂಸ್ಥೆಯಲ್ಲಿ ಹಲವು ಯುವತಿಯರು ವ್ಯಾಸಂಗ ಮಾಡುತ್ತಿದ್ದರು. ಸಂಸ್ಥೆಗೆ ಸೋಮವಾರ ಹಾಜರಾದ ಯುವತಿಯರಲ್ಲಿ ಕೆಲವರು ಬಿಸಿಲಿನ ತಾಪ ತಾಳಲಾರದೆ ಬಾಲ್ಕನಿ ಕೆಳಗೆ ನಿಂತಿದ್ದರು. ಈ ವೇಳೆ ಬಾಲ್ಕನಿಯ ಲಿಂಟ್ಲ್ ಕುಸಿದು ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡಿದ್ದ ಮೂವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಲ್ಲಿ ಇಬ್ಬರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಯುವತಿಯರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿ ಬರಬೇಕಿದೆ. ಗಾಯಗೊಂಡಿದ್ದ ಯುವತಿಯನ್ನು ಅಂಬಾಲಾದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.