ಕೊಟ್ಟಾಯಂ: ಪ್ರಾಚ್ಯವಸ್ತು ವಂಚನೆ ಪ್ರಕರಣದಲ್ಲಿ ಮಾನ್ಸನ್ ಮಾವುಂಕಲ್ ನನ್ನು ಮತ್ತೆ ಬಂಧಿಸಲಾಗಿದೆ. ಪುರಾತನ ವಸ್ತುಗಳ ವ್ಯವಹಾರದಲ್ಲಿ ಪಾಲುದಾರರನ್ನಾಗಿಸುವುದಾಗಿ ಭರವಸೆ ನೀಡಿ ದಂಪತಿಯಿಂದ 85 ಲಕ್ಷ ರೂಪಾಯಿ ಸುಲಿಗೆ ಮಾಡಿದ ಪ್ರಕರಣದಲ್ಲಿ ವಕತ್ತಾನಂ ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣದಲ್ಲಿ ತ್ರಿಶೂರ್ ಮೂಲದ ಜೋಶಿ ಮತ್ತು ಮಾನ್ಸನ್ ಮಾವುಂಗಲ್‍ನ ಮಾಜಿ ಮ್ಯಾನೇಜರ್ ನಿಧಿ ಕುರಿಯನ್ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ನ್ಯಾಯಾಲಯದ ಆದೇಶದಂತೆ ಮಾವುಂಕಲ್ ಅವರನ್ನು ವಿಯ್ಯೂರು ಕೇಂದ್ರ ಕಾರಾಗೃಹದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.