ಕಾಸರಗೋಡು: ಮಾನ್ಯ ಕೊಲ್ಲಂಗಾನ 'ಶ್ರೀನಿಲಯ' ನಿವಾಸಿ, ನಿವೃತ್ತ ಕಂದಾಯ ಇಲಾಖೆ ಅಧಿಕಾರಿ, ಸಹಿತಿ ಉದಯ ಶಂಕರ ಎನ್.ಎ(76)ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಮನೆಯಲ್ಲಿ ಅಸೌಖ್ಯ ಕಾಣಿಸಿಕೊಂಡ ಇವರನ್ನು ತಕ್ಷಣ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಗಿರಲಿಲ್ಲ. ಕಂದಾಯ ಇಲಾಖೆಯಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದ ಇವರು ಉಪ ತಹಸೀಲ್ದಾರ್ ಆಗಿ ನಿವೃತ್ತರಾಗಿದ್ದರು.
ನಾಟಕ ರಚನೆ, ನಿರ್ದೇಶನ, ಪ್ರಸಾದನ, ರಂಗಸಜ್ಜಿಕೆಯಲ್ಲಿ ಗುರುತಿಸಿಕೊಂಡಿದ್ದ ಇವರು ಜಿಲ್ಲೆಯ ತುಳು, ಕನ್ನಡ, ಮಲಯಾಳ ರಂಗ ಭೂಮಿ ಸಾಹಿತ್ಯದ ಮೂಲಕ ಪರಿಚಿತರಾಘಿದ್ದರು. ಕಾಸರಗೋಡು ಜಿಲ್ಲಾ ತುಳುಕೂಟ ಕಾರ್ಯದರ್ಶಿ, ಕೊಲ್ಲಂಗಾನ ನವರಂಗ್ ಆಟ್ರ್ಸ್ ಸಥಾಪಕ ಅದ್ಯಕ್ಷ, ಕೊಲ್ಲಂಗಾನ ಶ್ರೀ ಶರದಾ ಭಜನಾಮಂದಿರ ಸ್ಥಾಪಕ ಅಧ್ಯಕ್ಷರಾಗಿದ್ದ ಇವರಿಗೆ ಕೇರಳ ರಾಜ್ಯೋದಯ ಪ್ರಶಸ್ತಿ, ಧರ್ಮಸ್ಥಳದ ಶ್ರೀ ರತ್ನವರ್ಮ ಹೆಗ್ಗಡೆ ಸಮಾರಕ ನಾಟಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದುಕೊಂಡಿದ್ದರು.ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.