ಠಾಣೆ: ಪುಣೆಯಲ್ಲಿನ ಪೋಶೆ ಕಾರು ಅಪಘಾತ ತೀವ್ರ ಚರ್ಚೆಯಲ್ಲಿ ಇರುವಂತೆಯೇ, ವ್ಯಕ್ತಿಯೊಬ್ಬ ಬಾನೆಟ್‌ನ ಮೇಲೆ ಮಲಗಿರುವಂತೆಯೇ, 17 ವರ್ಷದ ಬಾಲಕ ಬಿಎಂಡಬ್ಲ್ಯೂ ಕಾರನ್ನು ವೇಗವಾಗಿ ಚಲಾಯಿಸಿ 'ಸ್ಟಂಟ್' ಪ್ರದರ್ಶಿಸಿರುವ ಘಟನೆ ಇಲ್ಲಿ ನಡೆದಿದೆ.
ಠಾಣೆ: ಪುಣೆಯಲ್ಲಿನ ಪೋಶೆ ಕಾರು ಅಪಘಾತ ತೀವ್ರ ಚರ್ಚೆಯಲ್ಲಿ ಇರುವಂತೆಯೇ, ವ್ಯಕ್ತಿಯೊಬ್ಬ ಬಾನೆಟ್‌ನ ಮೇಲೆ ಮಲಗಿರುವಂತೆಯೇ, 17 ವರ್ಷದ ಬಾಲಕ ಬಿಎಂಡಬ್ಲ್ಯೂ ಕಾರನ್ನು ವೇಗವಾಗಿ ಚಲಾಯಿಸಿ 'ಸ್ಟಂಟ್' ಪ್ರದರ್ಶಿಸಿರುವ ಘಟನೆ ಇಲ್ಲಿ ನಡೆದಿದೆ.
ಕಾರು ಚಾಲನೆಯ 'ಸ್ಟಂಟ್'ನ ವಿಡಿಯೊ ಜಾಲತಾಣದಲ್ಲಿ ಹರಿದಾಡಿದಂತೆಯೇ ಪೊಲಿಸರು ಪ್ರಕರಣ ದಾಖಲಿಸಿದ್ದಾರೆ.
ಬಾಲಕನು ಜಿಲ್ಲೆಯ ಕಲ್ಯಾಣ್ ನಗರದ ಜನನಿಬಿಡ ಶಿವಾಜಿಚೌಕ್‌ನಲ್ಲಿ ಕಾರು ಚಾಲನೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಜಾಲತಾಣದ ರೀಲ್ಸ್‌ನಿಂದ ಪ್ರಭಾವಿತನಾಗಿದ್ದ ಬಾಲಕ, ತಂದೆಯ ಮೇಲೆ ಒತ್ತಡ ಹೇರಿ ₹ 5 ಲಕ್ಷಕ್ಕೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಕಾರಣವಾಗಿದ್ದು, ಲೈಸೆನ್ಸ್ ಇಲ್ಲದಿದ್ದರೂ ಓಡಿಸಿದ್ದ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.