ಮಂಜೇಶ್ವರ: ಬಾವಿಯ ಆವರಣಗೋಡೆಯಲ್ಲಿ ನಿಂತು ಪೈಪು ಅಳವಡಿಸುವ ಮಧ್ಯೆ ಆಯತಪ್ಪಿ ಬಿದ್ದು, ಮನೆ ಮಾಲಿಕ ಮೃತಪಟ್ಟಿದ್ದಾರೆ. ವರ್ಕಾಡಿ ಕೊಡ್ಲಮೊಗರು ಬಂಡಾಸಾಲೆ ನಿವಾಸಿ, ಪ್ರಸಕ್ತ ಮಂಗಳೂರಿನ ಕೊಟ್ಟಾರದಲ್ಲಿ ವಾಸಿಸುತ್ತಿರುವ ರಾಜೇಂದ್ರ ಶೆಟ್ಟಿ(54)ಮೃತಪಟ್ಟವರು.
ಕೊಡ್ಲಮೊಗರಿನ ತಮ್ಮ ಮನೆಯನ್ನು ಬಾಡಿಗೆಗ ನೀಡಿದ್ದು, ನವೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಶುಕ್ರವಾರ ಆಗಮಿಸಿದ್ದರು. ಈ ಮಧ್ಯೆ ಬಾವಿಗೆ ಪೈಪು ಅಳವಡಿಸುವ ಮಧ್ಯೆ ಆಯತಪ್ಪಿ ಬಿದ್ದು, ತಲೆಗೆ ಗಂಭೀರ ಗಾಯಗಳುಂಟಾಗಿತ್ತು. ತಕ್ಷಣ ಇವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಬಿಜೆಪಿ ಕಾರ್ಯಕರ್ತರಾಗಿದ್ದ ಇವರು, ಈ ಹಿಂದೆ ವರ್ಕಾಡಿ ಸುಂಕದಕಟ್ಟೆಯಲ್ಲಿ ಜೀಪುಚಾಲಕರಾಗಿ ದುಡಿಯುತ್ತಿದ್ದರು. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.