ತಿರುವನಂತಪುರಂ: ಯುವಕರನ್ನು ದೇವಸ್ಥಾನಗಳತ್ತ ಸೆಳೆಯಲು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಕರೆನೀಡಿದ್ದಾರೆ. ದೇವಾಲಯಗಳ ಭಾಗವಾಗಿ ಗ್ರಂಥಾಲಯಗಳನ್ನು ಪ್ರಾರಂಭಿಸುವುದು ಸೇರಿದಂತೆ ಈ ಉದ್ದೇಶಕ್ಕಾಗಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅವರು ಉದಿಯನ್ನೂರು ದೇವಿ ದೇವಸ್ಥಾನದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇವಸ್ಥಾನಗಳು ಕೇವಲ ನಾಮಸ್ಮರಣೆ ಮಾಡುವ ತಾಣUಳÀಷ್ಟೇ ಆಗದೆ ಬದಲಾಗುತ್ತಿರುವ ಸಮಾಜದ ಪ್ರತಿಬಿಂಬವಾಗಬೇಕು ಎಂದರು. ಯುವಕರನ್ನು ದೇವಸ್ಥಾನಗಳತ್ತ ಆಕರ್ಷಿಸುವ ನಿಟ್ಟಿನಲ್ಲಿ ಟ್ರಸ್ಟ್‍ಗಳು ಕೆಲಸ ಮಾಡಬೇಕು ಎಂದರು.
ದೇವಸ್ಥಾನಗಳಲ್ಲಿ ಗ್ರಂಥಾಲಯಗಳನ್ನು ತೆರೆಯುವುದರಿಂದ ಯುವಕರ ಪ್ರಾತಿನಿಧ್ಯ ಹೆಚ್ಚುತ್ತದೆ. ಇದು ಅವರಿಗೆ ಓದಲು, ವಿವಿಧ ವಿಷಯಗಳನ್ನು ಚರ್ಚಿಸಲು ಮತ್ತು ಅವರ ವೃತ್ತಿಜೀವನವನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ. ಟ್ರಸ್ಟ್ ಗಳು ಈ ರೀತಿ ಕೆಲಸ ಮಾಡಲು ಸಿದ್ಧರಾದರೆ ಸಮಾಜದಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತದೆ ಎಮದವರು ತಿಳಿಸಿದರು.
ಇಸ್ರೋದ ಮಾಜಿ ಅಧ್ಯಕ್ಷ ಜಿ ಮಾಧವನ್ ನಾಯರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.