HEALTH TIPS

ಮುಂದುವರಿದ ಇಸ್ರೇಲ್-ಪ್ಯಾಲೆಸ್ಟೀನ್‌ ಕದನ

             ಫಾ: ಗಾಜಾಪಟ್ಟಿಯಲ್ಲಿ ಇಸ್ರೇಲ್‌ ಸೇನೆ ಮತ್ತು ಪ್ಯಾಲೆಸ್ಟೀನ್‌ ಬಂಡುಕೋರರ ನಡುವಿನ ಕದನ ಭಾನುವಾರವೂ ಮುಂದುವರಿಯಿತು.

           'ಗಾಜಾ ಪಟ್ಟಿಯ ಉತ್ತರಭಾಗ ಮತ್ತು ಜಬಾಲಿಯ ನಿರಾಶ್ರಿತರ ಕೇಂದ್ರದ ಮೇಲೆ ಶನಿವಾರ ರಾತ್ರಿಯಿಡಿ ಇಸ್ರೇಲ್ ದಾಳಿ ನಡೆಸಿದ್ದು, ಅಪಾರ ಹಾನಿಯಾಗಿದೆ' ಎಂದು ಪ್ಯಾಲೆಸ್ಟೀನ್‌ನಿಂದ ವರದಿಯಾಗಿದೆ.

            'ನಿನ್ನೆಯ ರಾತ್ರಿ ಬಹಳ ಕಷ್ಟಕರವಾಗಿತ್ತು. ಶನಿವಾರ ಮಧ್ಯಾಹ್ನದಿಂದ ತೀವ್ರವಾದ ಬಾಂಬ್ ಸ್ಫೋಟದ ಶಬ್ದ ಕೇಳಿಸುತ್ತಿದೆ' ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.

             'ಸಹಾಯವನ್ನು ನಿರೀಕ್ಷಿಸಿ ಜನರಿಂದ ತುಂಬಾ ಕರೆಗಳು ಬರುತ್ತಿದ್ದು, ಎಲ್ಲರಿಗೆ ಪ್ರತಿಕ್ರಿಯಿಸ‌ಲು ಸಾಧ್ಯವಾಗುತ್ತಿಲ್ಲ' ಎಂದು ಪ್ಯಾಲೆಸ್ಟೀನ್‌ ನಾಗರಿಕ ಸೇನೆ ತಿಳಿಸಿದೆ.

             'ರಫಾದಿಂದ ಈವರೆಗೆ ಮೂರು ಲಕ್ಷ ಜನ ವಲಸೆ ಹೋಗಿದ್ದಾರೆ. ಕರಾವಳಿ ಭಾಗದಲ್ಲಿರುವ 4,50,000 ಜನರು ತೀವ್ರ ಸಂಕಷ್ಟದಲ್ಲಿದ್ದಾರೆ' ಎಂದು ವಿಶ್ವಸಂಸ್ಥೆಯಿಂದ ಪ್ಯಾಲೆಸ್ಟೀನ್‌ ನಿರಾಶ್ರಿತರ ನೆರವಿಗೆ ನಿಯೋಜನೆಯಾಗಿರುವ ಸಮಿತಿ ತಿಳಿಸಿದೆ.

               ರಫಾದ ಮುಕ್ಕಾಲು ಭಾಗವನ್ನು ಇಸ್ರೇಲ್ ಆಕ್ರಮಿಸಿಕೊಂಡಿದ್ದು, ದಾಳಿ ಮುಂದುವರಿದಿದೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries