ಸ್ಪೀಡ್‍ಕ್ಯೂಬರ್‍ಗಳು ರೂಬಿಕ್ಸ್ ಕ್ಯೂಬ್ ಅನ್ನು ಒಂದು ನಿಮಿಷದಲ್ಲಿ ಪರಿಹರಿಸುವುದನ್ನು ನೋಡಿರಬಹುದು. ಪ್ರಪಂಚದ ಕೆಲವು ಪ್ರಸಿದ್ಧ ವ್ಯಕ್ತಿಗಳು ಇದನ್ನು ಅತಿ ಸುಲಭದಲ್ಲಿ ಪರಿಹರಿಸಲು 10 ಸೆಕೆಂಡುಗಳಿಗಿಂತ ಕಡಮೆ ಸಮಯವನ್ನು ತೆಗೆದುಕೊಳ್ಳುತ್ತಾರೆ.
ಹಾಗಾದರೆ ರೋಬೋಟ್‍ಗೆ ರೂಬಿಕ್ಸ್ ಕ್ಯೂಬ್ ಸಿಕ್ಕರೆ ಏನು? ಎಷ್ಟು ಸಮಯ ಬೇಕಾಗುತ್ತದೆ?
ಜಪಾನ್‍ನ ಮಿತ್ಸುಬಿಷಿ ಎಲೆಕ್ಟ್ರಿಕ್ ಕಾಪೆರ್Çರೇಷನ್‍ನ ಎಂಜಿನಿಯರಿಂಗ್ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾದ ರೋಬೋಟ್ ರೂಬಿಕ್ಸ್ ಕ್ಯೂಬ್ ಅನ್ನು ಹೆಚ್ಚಿನ ವೇಗದಲ್ಲಿ ಪರಿಹರಿಸಿದೆ. ಇದಕ್ಕಾಗಿ ರೋಬೋಟ್‍ಗೆ 1 ಸೆಕೆಂಡ್‍ಗಿಂತ ಕಡಮೆ ಸಮಯವಷ್ಟೇ ಬಳಸಿಕೊಂಡು ಅಚ್ಚರಿಮೂಡಿಸಿತು. ಇದರೊಂದಿಗೆ ಜಪಾನ್ ಕಂಪನಿಯ ರೋಬೋಟ್ ಗಿನ್ನಿಸ್ ದಾಖಲೆ ಸೇರಿದೆ.
ಟೋಕಿಯೋದಲ್ಲಿ ನಡೆದ ಸಮಾರಂಭದಲ್ಲಿ ರೋಬೋಟ್ ಗಿನ್ನೆಸ್ ದಾಖಲೆ ಮಾಡಿದೆ. ರೋಬೋಟ್ 3*3*3 ಪಜಲ್ ಕ್ಯೂಬ್ ಅನ್ನು ಕೇವಲ 0.305 ಸೆಕೆಂಡುಗಳಲ್ಲಿ ಪರಿಹರಿಸಿದೆ. ಅಂದರೆ, ಪ್ರದರ್ಶನವು ಮಾನವ ಕಣ್ಣು ನೋಡುವುದಕ್ಕಿಂತ ವೇಗವಾಗಿ ನಡೆಯಿತು. ಹಾಗಾಗಿ ಗಿನ್ನಿಸ್ ವಿಶ್ವ ದಾಖಲೆಯ ಅಧಿಕಾರಿಗಳು ವೀಕ್ಷಕರಿಗಾಗಿ 'ಸ್ಲೋ ಮೋಷನ್'ನಲ್ಲಿ ವಿಡಿಯೋ ದೃಶ್ಯವನ್ನು ಪ್ರಸ್ತುತಪಡಿಸಿದ್ದಾರೆ.
ಮಿತ್ಸುಬಿಷಿ ಎಲೆಕ್ಟ್ರಿಕ್ ಕಾಪೆರ್Çರೇಷನ್‍ನ ಇಂಜಿನಿಯರ್ ಟೊಕುಯಿ ಈ ವೇಗದ ರೋಬೋಟ್ ಹಿಂದೆ ಕೆಲಸ ಮಾಡಿರುವÀರು. ಇದು ತುಂಬಾ ಸವಾಲಿನ ಮತ್ತು ಆಸಕ್ತಿದಾಯಕ ಯೋಜನೆಯಾಗಿದೆ ಎಂದು ಟೊಕುಯಿ ಪ್ರತಿಕ್ರಿಯಿಸಿದ್ದಾರೆ.
ಚೀನಾದ ಪ್ರಜೆ ಯಿಹೆಂಗ್ ವಾಂಗ್ ಅವರು ರೂಬಿಕ್ಸ್ ಕ್ಯೂಬ್ ಅನ್ನು ಈ ವರೆಗೆ ವೇಗವಾಗಿ ಪರಿಹರಿಸಿದ ವ್ಯಕ್ತಿ ಎಂಬ ದಾಖಲೆಯನ್ನು ಹೊಂದಿದ್ದಾರೆ. ಗಿನ್ನಿಸ್ ಅಧಿಕಾರಿಗಳ ಪ್ರಕಾರ, ಯುವಕ 3*3*3 ಪಜಲ್ ಕ್ಯೂಬ್ ಅನ್ನು 4.48 ಸೆಕೆಂಡುಗಳಲ್ಲಿ ಪರಿಹರಿಸಿದ್ದನು.