ಸಮರಸ ಚಿತ್ರಸುದ್ದಿ: ಕುಂಬಳೆ: ಕಾಸರಗೋಡು ಕೇಂದ್ರೀಯ ವಿದ್ಯಾಲಯ ನಂ.1 ಸಿಪಿಸಿಆರ್‍ಐ ಪ್ಲಸ್ ಟು(12 ನೇ ತರಗತಿ) ತರಗತಿಯ ವಿದ್ಯಾರ್ಥಿನಿ ಬಿಶಾಖ ಆರ್.ಆಳ್ವ 2024ರ ಸಿಬಿಎಸ್‍ಇ ಪರೀಕ್ಷೆಯಲ್ಲಿ 96.2 ಶೇ. ಅಂಕ ಪಡೆದು ಶಾಲೆಯಲ್ಲಿ ಟಾಪರ್ ಆಗಿ ಆಯ್ಕೆಯಾಗಿದ್ದಾರೆ. ಈಕೆ ಕಳೆದ ಹಲವು ವರ್ಷಗಳಿಂದ ವಿವಿಧ ಸ್ಪರ್ಧೆ ಹಾಗೂ ವಿದ್ಯಾಭ್ಯಾಸದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿ ಕೊಂಡಿದ್ದಾರೆ. ಈಕೆ ಕುಂಬಳೆ ಸಮೀಪದ ಬಂಬ್ರಾಣ ಗ್ರಾಮದ ಉಜಾರಿನ ರಮೇಶ್ ಆಳ್ವ ಹಾಗೂ ಪವಿತ್ರ ಆಳ್ವ ದಂಪತಿಗಳ ಪುತ್ರಿಯಾಗಿದ್ದಾರೆ.