HEALTH TIPS

ಕಾರಡ್ಕ ಸೊಸೈಟಿಯಲ್ಲಿ ಲಕ್ಷಾಂತರ ರೂ. ವಂಚನೆ-ಮೂವರ ಬಂಧನ

                  ಮುಳ್ಳೇರಿಯ: ಸಿಪಿಎಂ ಅಧೀನದಲ್ಲಿರುವ ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋಓಪರೇಟಿವ್ ಸೊಸೈಟಿಯಲ್ಲಿ ಭಾರೀ ವಂಚನಾ ಹಗರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ವಂಚನಾ ಹಗರಣದ ಮುಖ್ಯ ಸೂತ್ರಧಾರ, ಸಹಕಾರಿ ಸಂಘ ಕಾರ್ಯದರ್ಶಿ, ಕರ್ಮಂತೋಡಿ ನಿವಾಸಿ ಕೆ. ರತೀಶ್‍ನ ಸಹಚರರಾದ ನೆಲ್ಲಿಕ್ಕಾಟ್ ನಿವಾಸಿ ಅನಿಲ್ ಕುಮಾರ್, ಪರಕ್ಲಾಯಿ ನಿವಾಸಿ ಗಫೂರ್ ಹಾಗೂ ಮವ್ವಲ್ ನಿವಾಸಿ ಬಶೀರ್ ಬಂಧಿತರು. ಈ ಮೂರು ಮಂದಿಯ ಹೆಸರಲ್ಲಿ ಚಿನ್ನಾಭರಣ ಅಡವಿರಿಸಿ ರತೀಶನ್ ಭಾರೀ ಮೊತ್ತದ ಹಣ ಪಡೆದಿದ್ದನು. ಅಡವಿರಿಸಿದ ಚಿನ್ನದ ಸಾಚಾತನದ ಬಗ್ಗೆಯೂ ಇದೀಗ ಸಂಶಯ ಉಂಟಾಗಿದೆ. ಬಂಧಿತ ಬಶೀರ್ ಪಳ್ಳಿಕೆರೆ ಗ್ರಾಮ ಪಂಚಾಯಿತಿಯ ಮುಸ್ಲಿಂಲೀಗ್‍ನಿಂದ ಆಯ್ಕೆಯಾಗಿರುವ ಜನಪ್ರತಿನಿಧಿಯಾಗಿದ್ದಾನೆ. ಇವರಿಗೆ ರತಿಸ್ ಮೂಲಕವೇ ಹಣ ವರ್ಗಾವಣೆಯಾಗಿರುವುದನ್ನು ಪತ್ತೆಹಚ್ಚಲಾಗಿದೆ. 

                ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್‍ಗೆ ಹಸ್ತಾಂತರಿಸಲಾಗಿದ್ದು, ಡಿವೈಎಸ್‍ಪಿ ಶಿಬು ಪಾಪಚ್ಚನ್ ನೇತೃತ್ವದ ಪೊಲೀಸರ ತಂಡ ತನಿಖೆ ನಡೆಸುತ್ತಿದೆ. ಕರ್ನಾಟಕಕ್ಕೆ ಪರಾರಿಯಾಗಿದ್ದ ರತೀಶನ್, ಅಲ್ಲಿಂದ ಗೋವಾಕ್ಕೆ ತೆರಳಿರುವ ಬಗ್ಗೆ ಮಾಹಿತಿಯಿದೆ. ನಕಲಿ ದಾಖಲೆ ತಯಾರಿಸಿ ಬ್ಯಾಂಕಿನಿಂದ 4,76ಕೋಟಿ ರೂ. ವಂಚಿಸಿ ಪರಾರಿಯಾಗಿದ್ದನು.  ಬೆಂಗಳೂರು ಹಾಗೂ ವಯನಾಡಿನಲ್ಲಿ ರತೀಶ್ ಜಾಗ ಖರೀದಿಸಿರುವ ಬಗ್ಗೆಯೂ ಮಾಹಿತಿಯಿದೆ. ಪ್ರಾಥಮಿಕ ಪರಿಶೋಧನೆಯಿಂದ 4,75,99,907 ರೂ. ಮೊತ್ತದ ವಂಚನೆ ಪತ್ತೆಹಚ್ಚಲಾಗಿದೆ. ಇದರಲ್ಲಿ ಚಿನ್ನಾಭರಣ ಪಡೆಯದೇ ಏಳು ಲಕ್ಷ ರೂ. ಸಾಲ ನೀಡಿರುವುದನ್ನೂ ಪತ್ತೆಹಚ್ಚಲಾಗಿದೆ. 2024 ಜನವರಿಯಿಂದ ತೊಡಗಿ ವಿವಿಧ ದಿನಗಳಲ್ಲಾಗಿ ಹಣ ಸಾಲವಾಗಿ ನೀಡಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries