ಬೆಂಡೆಕಾಯಿ ನಮ್ಮ ನೆಚ್ಚಿನ ತರಕಾರಿಗಳಲ್ಲಿ ಒಂದಾಗಿದೆ. ಬೆಂಡೆ ಸಾಂಬಾರ್, ಮೇಲೋಗರ, ಪಲ್ಯ, ಮೆಣಸುಕಾಯಿ ಹೀಗೆ ನಾನಾ ರೀತಿಯಲ್ಲಿ ಸೇವಿಸುತ್ತೇವೆ.
ಬೆಂಡೆಯಲ್ಲಿ ವಿಟಮಿನ್‍ಗಳು, ಖನಿಜಗಳು ಮತ್ತು ಆಂಟಿಆಕ್ಸಿಡೆಂಟ್‍ಗಳು ಸಮೃದ್ಧವಾಗಿವೆ. ಆದರೆ, ವಿಶೇಷವೆಂಬಂತೆ ಬೆಂಡೆಯ ನೀರನ್ನೂ(ಜ್ಯೂಸ್) ಸೇವಿಸಬಹುದೆಂಬುದು ಎಷ್ಟು ಜನರಿಗೆ ತಿಳಿದಿದೆ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ತುಂಬಿದ ನೀರನ್ನು ಕುಡಿಯುವುದರಿಂದ ಆರೋಗ್ಯ ಪ್ರಯೋಜನಗಳೇನು? ಈ ನೀರನ್ನು ಹೇಗೆ ತಯಾರಿಸಲಾಗುತ್ತದೆ?ನೋಡೋಣ.
ಬೆಂಡೆಕಾಯಿ ನೀರು ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಇತ್ಯಾದಿಗಳಿಗೆ ಒಳ್ಳೆಯದು.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಟೈಪ್ 2 ಮಧುಮೇಹವನ್ನು ನಿಯಂತ್ರಿಸಲು ಮತ್ತು ತಡೆಯಲು ಸಹಾಯ ಮಾಡುತ್ತದೆ.
ದೇಹದಲ್ಲಿ ಉರಿಯೂತವನ್ನು ಕಡಮೆ ಮಾಡುತ್ತದೆ. ಇದು ಗೌಟ್ ನಂತಹ ಸಮಸ್ಯೆಗಳನ್ನೂ ನಿವಾರಿಸುತ್ತದೆ.
ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ಬೆಂಡೆಯ ಫೈಬರ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಮೆ ಮಾಡಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಮೆ ಮಾಡುವುದರಿಂದ ಹೃದಯ ಕಾಯಿಲೆ ಮತ್ತು ಪಾಶ್ರ್ವವಾಯು ಅಪಾಯದಿಂದ ದೂರವಿರಲು ಸಾಧ್ಯ.
ಇದು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ, ಶುಷ್ಕತೆ ಮತ್ತು ಸುಕ್ಕುಗಳನ್ನು ಕಡಮೆ ಮಾಡುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸೋಂಕುಗಳ ವಿರುದ್ಧ ಹೋರಾಡುತ್ತದೆ.
ಮೂಳೆಗಳ ಆರೋಗ್ಯ ಮತ್ತು ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು.
ತಯಾರಿ ಹೇಗೆ?
ಬೆಂಡೆಯ ಮೇಲ್ಭಾಗವನ್ನು ಚೆನ್ನಾಗಿ ತೊಳೆಯಿರಿ. ತುದಿಗಳನ್ನು ಕತ್ತರಿಸಿದ ನಂತರ, ಸಣ್ಣಸಣ್ಣ ತುಂಡುಗಳಾಗಿ ಕತ್ತರಿಸಿ. ಒಂದು ಬಟ್ಟಲಿನಲ್ಲಿ ಬೆಂಡೆಕಾಯಿ ತುಂಡುಗಳನ್ನು ಹಾಕಿ ಮತ್ತು ಅದರಲ್ಲಿ 2-3 ಕಪ್ ನೀರು ಸುರಿಯಿರಿ. ನಂತರ ಪಾತ್ರೆ ಮುಚ್ಚಿ. ಕನಿಷ್ಠ 8-12 ಗಂಟೆಗಳ ನಂತರ, ನೀರಿನಿಂದ ತುಂಡುಗಳನ್ನು ತೆಗೆದುಹಾಕಿ. ಉಳಿದ ನೀರನ್ನು ಕುಡಿಯಿರಿ.
ಆದರೆ, ಇವೆಲ್ಲ ದಿನಸಕ್ಕೊಮ್ಮೆಯೋ, ವಾರಕ್ಕೊಮ್ಮೆಯೋ ಸೇವಿಸಬೇಕು. ಯಾವುದಕ್ಕೂ ಮೊದಲು ನಿಮ್ಮ ಕುಟುಂಬ ವೈದ್ಯರಲ್ಲಿ ಸಮಾಲೋಚಿಸಿ.